ವೃತ್ತಿಪರರು, ಹವ್ಯಾಸಿ, ಇಂಟರ್‌ಮೀಡಿಯೇಟ್, ಮಾಸ್ಟರ್, ಜಂಬಲ್ಡ್ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಮೊದಲ ಬಹುಮಾನ 18 ಸಾವಿರ ರೂ. ಮತ್ತು ಟ್ರೋಫಿ, ದ್ವಿತೀಯ 13 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ಟ್ರೋಫಿ ಮತ್ತು ಮೆಡಲ್‌ಗಳನ್ನು ನೀಡಲಾಗುವುದು ಎಂದು ಕೂಟದ ಸಂಘಟಕಿ ವಿಜೇತಾ ಸನತ್ ತಿಳಿಸಿದರು.
Advertisement
ಮಂಗಳೂರು, ಉಡುಪಿ, ಪುತ್ತೂರು, ಹಾಸನ, ಶಿವಮೊಗ್ಗ, ಭದ್ರಾವತಿ ಮೊದಲಾದ ಕಡೆಗಳಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಒಟ್ಟು ಐದು ಮಂದಿ ಮಾಲಕರ ಐದು ತಂಡಗಳು, 65 ಆಟಗಾರರು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. 20 ವಯೋಮಿತಿಯಿಂದ 65+ ವಯೋಮಿತಿ ವರೆಗಿನ ಮಹಿಳಾ ಕ್ರೀಡಾಪಟುಗಳು ತಮ್ಮ ಪ್ರತಿಭೆ ತೋರ್ಪಡಿಸಲಿದ್ದಾರೆ ಎಂದರು.