Advertisement

ಎ. 2, 30: ಪಲ್ಸ್‌ ಪೋಲಿಯೋ; ದಡಾರ, ರುಬೆಲ್ಲಾ ನಿಯಂತ್ರಣ ಲಸಿಕೆ  

11:56 AM Mar 18, 2017 | Team Udayavani |

ಮಂಗಳೂರು: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕೆ ನೀಡುವ ಈ ವರ್ಷದ ಪ್ರಥಮ ಮತ್ತು ಎರಡನೆಯ ಕಾರ್ಯಕ್ರಮ ಎ. 2 ಮತ್ತು 30ರಂದು ಜರಗಲಿದೆ. 

Advertisement

ಜಿಲ್ಲೆಯಲ್ಲಿ 0-5 ವರ್ಷದೊಳಗಿನ 1,64,965 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 921
ತಂಡಗಳು ಮತ್ತು ಬೂತ್‌ಗಳು, 9ಸಂಚಾರಿ ತಂಡಗಳು ಹಾಗೂ 27ಟ್ರಾನ್ಸಿಟ್‌ ತಂಡಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 575 ಆರೋಗ್ಯ ಸಿಬಂದಿ, 2,079 ಅಂಗನವಾಡಿ ಕಾರ್ಯಕರ್ತೆಯರು, 1,100 ಆಶಾ ಕಾರ್ಯಕರ್ತೆಯರು, 89 ಅನುಷ್ಠಾನ ಅಧಿಕಾರಿಗಳು 1,852 ವಾಹನಗಳೊಂದಿಗೆ ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ನಿಗದಿಪಡಿಸಿದ ದಿನದ ಬಳಿಕ ಉಳಿದುಕೊಂಡಿರುವ ಮಕ್ಕಳ ನಿವಾಸಗಳಿಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉಳಿದ ಮೂರು ದಿನಗಳಲ್ಲಿ ನಗರ ಪ್ರದೇಶದಲ್ಲಿ ಹಾಗೂ ಎರಡು ದಿನ ಗ್ರಾಮಾಂತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲೆಯಲ್ಲಿ 1999ರ ಬಳಿಕ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ದಡಾರ ರುಬೆಲ್ಲಾ: ಕೊನೆಯ 2ದಿನ ಅವಕಾಶ: 
ದಡಾರ ಮತ್ತು ರುಬೆಲ್ಲಾ ನಿಯಂತ್ರಣ ಲಸಿಕೆ ಕಾರ್ಯಕ್ರಮ ಆರಂಭಗೊಂಡ ಬಳಿಕ ಜಿಲ್ಲೆಯಲ್ಲಿ 0-15 ವರ್ಷ ದೊಳಗಿನ ಮಕ್ಕಳಿಗೆ ಈ ವರೆಗೆ ಶೇ. 93.77 ಲಸಿಕೆ ನೀಡಲಾಗಿದೆ. ಇನ್ನೂ ಬಾಕಿ ಇರುವವರು ಎರಡು ದಿನಗಳ ಒಳಗಾಗಿ ಸ್ಥಳೀಯ ಅಂಗನ ವಾಡಿಗಳನ್ನು ಸಂಪರ್ಕಿಸಿ ಲಸಿಕೆ  ಹಾಕಿಸಿಕೊಳ್ಳಲು ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next