Advertisement
ಕೆಲವರಿಗೆ ಏನಾದರೂ ಮಾಡುತ್ತಲೇ ಇರುವ ಹುಚ್ಚು ಹವ್ಯಾಸ ಇರುತ್ತದೆ. ಈ ಹವ್ಯಾಸಗಳು ಸಂಶೋಧನೆಯಾಗಿ, ಪ್ರಯೋಗವಾಗಿ ಪ್ರತಿಫಲ ದಕ್ಕುವವರೆಗೂ ಪ್ರಯತ್ನ ಮಾತ್ರ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ದಿಲ್ಲಿಯ ಖಾಸಗಿ ಶಾಲೆಯೊಂದರ 9 ನೇ ತರಗತಿಯ 15 ವರ್ಷದ ಹುಡುಗನೊಬ್ಬನ ಹವ್ಯಾಸದ ಯಶಸ್ಸು ಎಂಥವರನ್ನೂ ಒಮ್ಮೆ ಅಚ್ಚರಿಗೊಳಿಸಬಹುದು.
Advertisement
ಅಪ್ಪನ ಮಾತಿಗೆ ಬಗ್ಗೆ ಅಷ್ಟಾಗಿ ಯೋಚಿಸದ ರಾಜನ್ ಗೆ, ಯೋಚನೆ ಇದದ್ದು ಒಂದೇ ಮುಂದೆ ಇ ಬೈಕ್ ತಯಾರಿಸಬೇಕೆನ್ನುವುದು. ಅದೊಂದು ದಿನ ಅಪ್ಪನ ಬಳಿ ತನಗೆ ಶಾಲೆಯಲ್ಲಿ ಇ – ಬೈಕ್ ಮಾಡುವ ಪ್ರಾಜೆಕ್ಟ್ ವೊಂದನ್ನು ಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿ, ಅಪ್ಪನ ಮನಸ್ಸನ್ನು ಒಪ್ಪಿಸುತ್ತಾನೆ. ಮಧ್ಯಮ ವರ್ಗದ ಕುಟುಂಬವಾಗಿರುವುದರಿಂದ ತಿಂಗಳಾಂತ್ಯಕ್ಕೆ ಹಣ ಉಳಿಸಿ, ಮಡದಿ ಮಕ್ಕಳ ಬೇಡಿಕೆಗೆ ಸ್ಪಂದಿಸುವುದು ದಶರಥ್ ಶರ್ಮಾ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.
ಅಪ್ಪನ ಹತ್ತಿರ ತನ್ನ ಪ್ರಾಜೆಕ್ಟ್ ಗೆ ಒಂದು ಹಳೆಯ ರೋಯಲ್ ಎನ್ ಫೀಲ್ಡ್ ಬೈಕ್ ಅಗತ್ಯವಿದೆ ಎಂದು ರಾಜನ್ ಕೇಳಿದಾಗ, ಅದಕ್ಕಾಗಿ ಆತನ ತಂದೆ, ಅಲ್ಲಿ ಇಲ್ಲಿ ಹಣ ಹೊಂದಿಸಿ, 10 ಸಾವಿರ ರೂಪಾಯಿ ಕೊಟ್ಟು ಗುಜರಿ ಅಂಗಡಿಯಿಂದ ಮಗ ಅಂದುಕೊಂಡ ಬೈಕನ್ನು ತರುತ್ತಾರೆ. ಬೈಕ್ ಏನೋ ಬಂತು ಆದರೆ, ಅದು ಗುಜರಿ ಅಂಗಡಿಯಲ್ಲಿದ್ದ ಅರೆ ಜೀವ ಕಳೆದುಕೊಂಡಿದ್ದ ಬೈಕ್. ಅದಕ್ಕಾಗಿ ಬೇಕಿದ್ದ ಸರಕುಗಳನ್ನು ಹುಡುಕಾಡುವುದು ರಾಜನ್ ನ ಉತ್ಸಾಹಕ್ಕೆ ಒಂದು ದೊಡ್ಡ ಸಾಹಸವೇ ಆಯಿತು.
ಇ ಬೈಕ್ ಗಾಗಿ ಬೇಕಿದ್ದ ಬ್ಯಾಟರಿ, ಹೆಡ್ ಲೈಟ್, ಅದು ಇದು ಎಂದು ಹುಡುಕಾಡಿ ತಂದ ಸರಕುಗಳಿಗೆ ಒಟ್ಟಾಗಿ 45 ಸಾವಿರಕ್ಕೂ ಅಧಿಕ ಖರ್ಚಾಗಿ ಹೋಯಿತು. ಮೂರು ತಿಂಗಳು ಸರಕು ಹುಡಕಾಟ ನಡೆಸುವ ವೇಳೆ ರಾಜನ್, ಯೂಟ್ಯೂಬ್ , ಗೂಗಲ್ ನಲ್ಲಿ ಇ – ಬೈಕ್ ತಯಾರಿಸುವ ವಿಧಾನವನ್ನು ನೋಡಿ ಅನುಸರಿಸುವುದರಲ್ಲಿ ಪಂಟನಾಗಿದ್ದ. ಇಂಜಿನ್ ಜಾಗಕ್ಕೆ ಬ್ಯಾಟರಿಯನ್ನು ಜೋಡಿಸಿ, ಗುಜರಿ ಬಿದ್ದಿದ್ದ ರೋಯಲ್ ಎನ್ ಫೀಲ್ಡ್ ಗೆ ಒಂದು ಹೊಸ ರೂಪ ಕೊಟ್ಟು, ಇ – ಬೈಕ್ ತಯಾರಿಸಿ, ಯಶಸ್ಸಾದ 15 ಹರೆಯದ ರಾಜನ್.
ರಾಜನ್ ತಯಾರಿಸಿದ ಇ – ಬೈಕ್ ಥೇಟ್ ರೋಯಲ್ ಎನ್ ಫೀಲ್ಡ್ ನಂತೆಯೇ ಇದೆ. ಹೆದ್ದಾರಿಯಲ್ಲಿ ಗಂಟೆಗೆ 80 ಕೀ.ಮಿ ಓಡುವ ಸಾಮರ್ಥ್ಯ, ಒಂದು ಬಾರಿ ಚಾರ್ಜ್ ಮಾಡಿದರೆ, 100 ಕಿ.ಮೀ ಓಡುತ್ತದೆ. ಮುಂದೆ ರಾಜನ್ ಇ – ಕಾರ್ ತಯಾರಿಸುವ ಗುರಿಯಿಟ್ಟುಕೊಂಡಿದ್ದಾನೆ. ಮಕ್ಕಳು ಯಾವುದೇ ವಯಸ್ಸಿನಲ್ಲಿ ಯಾವ ಸಾಧನೆಯನ್ನಾದರೂ ಮಾಡಬಲ್ಲರು ಎನ್ನುವುದು ರಾಜನ್ ತೋರಿಸಿಕೊಟ್ಟಿದ್ದಾನೆ.