ಕೀವ್: ರಷ್ಯಾ-ಉಕ್ರೇನ್ ಯುದ್ಧವು ಉಕ್ರೇನ್ ನ ಪ್ರಮುಖ ನಗರಗಳನ್ನು ಧ್ವಂಸಗೊಳಿಸಿದೆ. ಪ್ರತಿದಿನ ಶೆಲ್ಲಿಂಗ್ ನಡೆಯುತ್ತಿದೆ. ಭಯಾನಕ ಪರಿಸ್ಥಿತಿಯ ನಡುವೆ ಲಕ್ಷಾಂತರ ಜನರು ದೇಶ ಬಿಟ್ಟು ಹೋಗುತ್ತದೆ. ಈ ನಡುವೆ 98 ವರ್ಷದ ಮಹಿಳೆಯೊಬ್ಬರು ರಷ್ಯಾ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.
ಓಲ್ಹಾ ಟ್ವೆರ್ಡೋಖ್ಲಿಬೋವಾ ಎಂಬ 98 ವರ್ಷದ ಮಹಿಳೆ ಈ ಹಿಂದೆ ಯುದ್ಧದಲ್ಲಿ ಪಾಲ್ಗೊಂಡ ಅನುಭವಿ. ಎರಡನೇ ಮಹಾಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಆಕ್ರಮಣಕ್ಕೆ ಆದೇಶಿಸಿದ ನಂತರ, ಓಲ್ಹಾ ತನ್ನ ತಾಯಿನಾಡು ಉಕ್ರೇನ್ ನನ್ನು ರಕ್ಷಿಸಲು ಸೈನ್ಯಕ್ಕೆ ಸೇರಲು ಮುಂದಾಗಿದ್ದರು. ಅವಳ ವಯಸ್ಸಿನ ಕಾರಣದಿಂದಾಗಿ ಅವಳನ್ನು ನಿರಾಕರಿಸಲಾಯಿತು.
“98 ವರ್ಷ ಓಲ್ಹಾ ಟ್ವೆರ್ಡೋಖ್ಲಿಬೋವಾ ಅನುಭವಿ, ತನ್ನ ಜೀವನದಲ್ಲಿ ಎರಡನೇ ಬಾರಿಗೆ ಯುದ್ಧವನ್ನು ಎದುರಿಸಿದರು. ಅವರು ಮತ್ತೆ ತನ್ನ ಮಾತೃಭೂಮಿಯನ್ನು ರಕ್ಷಿಸಲು ಸಿದ್ಧಳಾಗಿದ್ದರು. ಆದರೆ ಎಲ್ಲಾ ಅರ್ಹತೆಗಳು ಮತ್ತು ಅನುಭವದ ಹೊರತಾಗಿಯೂ, ವಯಸ್ಸಿನ ಕಾರಣದಿಂದಾಗಿ ನಿರಾಕರಿಸಲಾಯಿತು.
ಇದನ್ನೂ ಓದಿ:ಮಾರಿಯುಪೋಲ್ ನಿವಾಸಿಗಳನ್ನು ಬಲವಂತವಾಗಿ ಕರೆದೊಯ್ದ ರಷ್ಯಾ!
Related Articles
ಉಕ್ರೇನ್ ನ ವಿದೇಶಾಂಗ ಸಚಿವಾಲಯದ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಹಿರಿಯ ಮಹಿಳೆಯ ದೇಶಪ್ರೇಮ ಮತ್ತು ಧೈರ್ಯದ ಬಗ್ಗೆ ಕೊಂಡಾಡಿದ್ದಾರೆ.