Advertisement

ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದ 98ರ ರಾಜ್‌ ಕುಮಾರ್‌

12:00 PM Dec 27, 2017 | Team Udayavani |

ಪಟ್ನಾ : 98 ವರ್ಷ ಪ್ರಾಯದ ರಾಜ್‌ ಕುಮಾರ್‌ ವೈಶ್‌  ಅವರು ನಳಂದ ಮುಕ್ತ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ  ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಅತ್ಯಪರೂಪದ ಸಾಧನೆಯನ್ನು ಮಾಡಿದ್ದಾರೆ. 

Advertisement

ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್‌ ಅವರು ಪಟ್ನಾದಲ್ಲಿನ ಎನ್‌ಓಯು ನಲ್ಲಿ ನಡೆದ ಘಟಿಕೋತ್ಸವದಲ್ಲಿ 98ರ ಹರೆಯದ ರಾಜ್‌ ಕುಮಾರ್‌ ವೈಶ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡಿ ಗೌರವಿಸಿದರು. 

ವೈಶ್‌ ಅವರು 2015ರಲ್ಲಿ ಎಂಎ ಇಕಾನಮಿಕ್ಸ್‌ಗೆ ನೋಂದಾವಣೆ ಮಾಡಿಕೊಂಡಿದ್ದರು.

“ಇಂದು ನನಗೆ ತುಂಬಾ ಖುಷಿಯಾಗಿದೆ. ನಾನು ಇದಕ್ಕಾಗಿ ತುಂಬಾ ಶ್ರಮಪಟ್ಟಿದ್ದೆ. ಸ್ನಾತಕೋತ್ತರ ಪದವಿ ಪಡೆಯುವ ನನ್ನ ಆಸೆ ಇಂದು ಈಡೇರಿದೆ. ಯುವಕರು ಕೇವಲ ಉದ್ಯೋಗ ಪಡೆಯುವಲ್ಲಿ ಕೇಂದ್ರೀಕರಿಸದೆ ಶಿಕ್ಷಣದಲ್ಲಿ ಮನಸ್ಸನ್ನು ಇಡಬೇಕು’ ಎಂದು ವೈಶ್‌ ಈ ಸಂದರ್ಭದಲ್ಲಿ ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next