Advertisement

973 ಆಂಗ್ಲ ಮಾಧ್ಯಮ ಶಾಲೆಯ ಪಟ್ಟಿ ಬಿಡುಗಡೆ

09:03 AM May 23, 2019 | mahesh |

ಬೆಂಗಳೂರು: ಹಾಲಿ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದ 973 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳು ಆರಂಭವಾಗಲಿವೆ. ಈ ಎಲ್ಲಾ ಶಾಲೆಗಳ ಜಿಲ್ಲಾ-ತಾಲೂಕುವಾರು ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Advertisement

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ದಾಖಲಾತಿಗಾಗಿ ಆಂಗ್ಲ ಮಾಧ್ಯಮ ಆರಂಭವಾಗಲಿರುವ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 28 ಶಾಲೆ, ಬಳ್ಳಾರಿಯಲ್ಲಿ 39, ಬೆಳಗಾವಿಯಲ್ಲಿ 34, ಚಿಕ್ಕೋಡಿಯಲ್ಲಿ 39, ಬೆಂಗಳೂರು ಗ್ರಾಮಾಂತರದಲ್ಲಿ 15, ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆಯಲ್ಲಿ 127, ಬೀದರ್‌ನಲ್ಲಿ 25, ಚಾಮರಾಜನಗರದಲ್ಲಿ 16, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು ಸೇರಿದಂತೆ 34 ಶೈಕ್ಷಣಿಕ ಜಿಲ್ಲೆಗಳಲ್ಲೂ 15ರಿಂದ 20 ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಸಕ್ತ ಸಾಲಿನಿಂದ ತೆರೆಯಲಾಗುತ್ತಿದೆ.

ಈ ಪಟ್ಟಿಯಲ್ಲಿ 276 ಕರ್ನಾಟಕ ಪಬ್ಲಿಕ್‌ ಶಾಲೆಗಳು ಸೇರಿಕೊಂಡಿವೆ. ಇದರ ಜತೆಗೆ 1ರಿಂದ 8ನೇ ತರಗತಿ ವರೆಗೆ ಇರುವ ಪ್ರಾಥಮಿಕ ಶಾಲೆ, 1ರಿಂದ 10ನೇ ತರಗತಿ ವರೆಗೆ ಇರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿಕೊಂಡಿವೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next