Advertisement

ರೈಲಿನಲ್ಲಿ ಝಾರ್ಖಂಡ್‌ಗೆ 97 ಮಂದಿ ಕಾರ್ಮಿಕರ ಪ್ರಯಾಣ

01:06 AM May 26, 2020 | Sriram |

ಪುತ್ತೂರು: ಪುತ್ತೂರು, ಸುಳ್ಯ, ಕಡಬದ ವಿವಿಧೆಡೆ ಇದ್ದ ಜಾರ್ಖಂಡ್‌ನ‌ 97 ಮಂದಿ ಕಾರ್ಮಿಕರನ್ನು ಶ್ರಮಿಕ್‌ ರೈಲಿನಲ್ಲಿ ಮಂಗಳೂರು ಮೂಲಕ ಝಾರ್ಖಂಡ್‌ಗೆ ಕಳುಹಿಸಿಕೊಡಲಾಯಿತು.

Advertisement

ಇವರ ಬಸ್‌ ಮತ್ತು ರೈಲು ಪ್ರಯಾಣ ವೆಚ್ಚವನ್ನು ಸರಕಾರ ಭರಿಸಲಿದೆ. ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಅವರ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ 97 ಮಂದಿ ಕಾರ್ಮಿಕರನ್ನು ಮಂಗಳೂರು ರೈಲು ನಿಲ್ದಾಣಕ್ಕೆ 4 ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು. ಅಲ್ಲಿಂದ ಅವರು ರೈಲು ಪ್ರಯಾಣ ನಡೆಸಿದ್ದಾರೆ.

ಪಂಚಾಕ್ಷರಿ ಮಂಟಪದಲ್ಲಿ ಕಾರ್ಮಿಕರನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಸ್ಕ್ರೀನಿಂಗ್‌ ನಡೆಸಿ ದಾಖಲಿಸಿಕೊಂಡರು. ಕಾರ್ಮಿಕರ ವಿಳಾಸ, ಮೊಬೈಲ್‌ ನಂಬರ್‌ ಮತ್ತು ಹೋಗುವ ಊರಿನ ವಿವರವನ್ನು ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯವರು ದಾಖಲಿಸಿಕೊಂಡರು. ನಗರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಜಂಬೂರಾಜ್‌ ಮಹಾಜನ್‌, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next