Advertisement

ರಾಜ್ಯಕ್ಕೆ  965 ಮೆ. ಟನ್‌ ಆಮ್ಲಜನಕ ಹಂಚಿಕೆ

12:55 AM May 07, 2021 | Team Udayavani |

ಬೆಂಗಳೂರು/ ಹೊಸದಿಲ್ಲಿ: ಕರ್ನಾಟಕದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರವು ರಾಜ್ಯಕ್ಕೆ ಹಂಚಿಕೆಯಾಗಿದ್ದ ಪ್ರಮಾಣವನ್ನು 965 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸಿದೆ.

Advertisement

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್‌, ಕೇರಳ, ರಾಜಸ್ಥಾನ, ಆಂಧ್ರಪ್ರದೇಶ, ಉತ್ತರಾಖಂಡ, ಗೋವಾ, ಒಡಿಶಾ, ಪುದುಚೆರಿ ಮತ್ತು ಜಮ್ಮು – ಕಾಶ್ಮೀರಕ್ಕೆ ಆಮ್ಲಜನಕ ಹಂಚಿಕೆ ಪ್ರಮಾಣವನ್ನು ಪರಿಷ್ಕರಿಸಲಾಗಿದೆ.

ಕರ್ನಾಟಕಕ್ಕೆ ಜೆಎಸ್‌ಡಬ್ಲ್ಯೂ ಇಂಡಸ್ಟ್ರಿಯಲ್‌ ಗ್ಯಾಸಸ್‌ ಪ್ರೈ.ಲಿ.ನಿಂದ 130 ಮೆ. ಟನ್‌, ಯೂನಿವರ್ಸಲ್‌ ಏರ್‌ ಪ್ರಾಡಕ್ಟ್$Õ ಪ್ರೈ.ಲಿ.ನಿಂದ 45 ಮೆ. ಟನ್‌, ಭರೂಕಾ ಗ್ಯಾಸಸ್‌ ಲಿ.ನಿಂದ 65 ಮೆ. ಟನ್‌, ಬಳ್ಳಾರಿ ಏರ್‌ ವಾಟರ್‌ನಿಂದ 105 ಮೆ. ಟನ್‌, ಬಳ್ಳಾರಿ ಹಾಗೂ ಹೊಸಪೇಟೆಯ ಲಿಂಡೆ 4 ಘಟಕಗಳಿಂದ ಒಟ್ಟು 410 ಮೆ. ಟನ್‌, ಲಿಂಡೆ ಕಾಳಿಂಗನಗರದ ಟಾಟಾ ಘಟಕದಿಂದ 90 ಮೆ. ಟನ್‌, ಟಾಟಾ- ಬಿಎಸ್‌ಎಲ್‌ ಅಂಗುಲ್‌ನಿಂದ 30 ಮೆ. ಟನ್‌, ಎಂಎಸ್‌ಎಂಇ ಎಎಸ್‌ಯು ಘಟಕ ಗಳಿಂದ 60 ಮೆ. ಟನ್‌ ಮತ್ತು ಆರ್‌ಐಎನ್‌ಎಲ್‌ ವಿಶಾಖಪಟ್ಟಣ ಉಕ್ಕು ಘಟಕದಿಂದ 30 ಮೆ. ಟನ್‌ ಹಂಚಿಕೆ ಮಾಡಲಾಗಿದೆ.

3 ದಿನಗಳಲ್ಲಿ ಲಸಿಕೆ ಪೂರೈಸಿ :

ಕರ್ನಾಟಕದಲ್ಲಿ ಲಸಿಕೆ ಕೊರತೆಯಿಂದಾಗಿ 2ನೇ ಡೋಸ್‌ ನೀಡಲು ಸಮಸ್ಯೆ ಎದುರಾಗಿರುವುದಕ್ಕೆ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆ ನೀಡಲು 3 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.

Advertisement

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗಳ ವಿಚಾರಣೆ ವೇಳೆ, ರಾಜ್ಯದಲ್ಲಿ 1ನೇ ಸುತ್ತಿನಲ್ಲಿ 65.83 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಈಗ ಅವರಿಗೆ ಎರಡನೇ ಡೋಸ್‌ ನೀಡಬೇಕಿದೆ. ಆದರೆ ಸರಕಾರದ ಬಳಿ ಕೇವಲ 7.76 ಲಕ್ಷ ಡೋಸ್‌ ಮಾತ್ರ ಇದೆ ಎಂದು ರಾಜ್ಯ ಸರಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್‌, ರಾಜ್ಯ ಸರಕಾರ ಒದಗಿಸಿರುವ ಅಂಕಿಅಂಶ ಗಮನಿಸಿದರೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮೊದಲ ಸುತ್ತಿನ ಲಸಿಕೆ ಪಡೆಯುವುದೇ ಅಸಾಧ್ಯ ಎಂಬ ಅನುಮಾನ ವ್ಯಕ್ತಪಡಿಸಿತು. ರಾಜ್ಯ ಸರಕಾರ ತತ್‌ಕ್ಷಣ ಎಷ್ಟು ಲಸಿಕೆ ಬೇಕೆಂಬ ಬಗ್ಗೆ ಕೇಂದ್ರ ಸರಕಾರಕ್ಕೆ  ಮನವಿ ಸಲ್ಲಿಸಬೇಕು ಎಂದು ಸೂಚಿಸಿತು.

ಆದೇಶ ಪ್ರಶ್ನಿಸಿ ಕೇಂದ್ರ ಸುಪ್ರೀಂಗೆ :

ಕರ್ನಾಟಕಕ್ಕೆ ಹಂಚಿಕೆಯಾಗುತ್ತಿರುವ ದ್ರವೀಕೃತ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು ದಿನಕ್ಕೆ 1,200 ಮೆ. ಟನ್‌ಗೆ ಹೆಚ್ಚಿಸುವಂತೆ ರಾಜ್ಯ ಹೈಕೋರ್ಟ್‌ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ರಾಜ್ಯದಲ್ಲಿ ಪರಿಸ್ಥಿತಿ ವಿಷಮಿಸುತ್ತಿದ್ದು, ಆಮ್ಲಜನಕ ಹಂಚಿಕೆಯನ್ನು ಏರಿಸುವಂತೆ ಕೇಂದ್ರ ಸರಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು. ಇದಕ್ಕೆ ತಡೆಯಾಜ್ಞೆ ನೀಡುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂ ಕೋರ್ಟ್‌ ಅನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next