Advertisement

96 ಕಾರ್ಮಿಕರು ತವರಿನತ್ತ

10:24 AM May 10, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ಉಳಿದುಕೊಂಡಿದ್ದ ರಾಜಸ್ಥಾನದ ಮೂಲದ 96 ಕಾರ್ಮಿಕರನ್ನು ಶನಿವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 4 ಬಸ್‌ಗಳ ಮೂಲಕ ಅವರ ರಾಜ್ಯಕ್ಕೆ ಕಳುಹಿಸಲಾಯಿತು.

Advertisement

ಇಲ್ಲಿನ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣದಿಂದ ನಾಲ್ಕು ಬಸ್‌ಗಳ ಮೂಲಕ ಅವರ ರಾಜಸ್ಥಾನದ ಬಲ್ಹೋತ್ರಾ ಜಿಲ್ಲೆಗೆ ಕಳುಹಿಸಲಾಯಿತು. ತಮ್ಮ ರಾಜ್ಯಕ್ಕೆ ತೆರಳಲು ಕಾರ್ಮಿಕರು ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಹೆಸರು ನೋಂದಾಯಿಸಿದ್ದರು. ರಾಜ್ಯಕ್ಕೆ ತೆರಳಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಒಪ್ಪಂದ ಮೇರೆಗೆ ಬಾಡಿಗೆ ಪಡೆದುಕೊಂಡಿದ್ದರು.

ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ತಲುಪಿಸಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಜಿಲ್ಲಾಡಳಿತದಿಂದ ಅನುಮತಿ ಪಡೆದು ಪ್ರಯಾಣ ಆರಂಭಿಸಿದರು. ಈ ನಾಲ್ಕು ಬಸ್‌ ಸೇರಿದಂತೆ ಹುಬ್ಬಳ್ಳಿ ಗ್ರಾಮೀಣ ವಿಭಾಗದಿಂದ ರಾಜಸ್ಥಾನಕ್ಕೆ ಒಟ್ಟು 5 ಬಸ್ ಗಳು ತೆರಳಿದಂತಾಗಿದೆ. ಪ್ರತಿ ಬಸ್‌ಗೆ ಇಬ್ಬರನ್ನು ಚಾಲಕರನ್ನು ನಿಯೋಜಿಸಿದ್ದು, ರಾಜಸ್ಥಾನದ ಬಲ್ಹೋತ್ರಾಕ್ಕೆ ಹೋಗಿ ಬರಲು ಸುಮಾರು 3,000 ಕಿ.ಮೀ. ಆಗಲಿದೆ. ಮಾರ್ಗ ಮಧ್ಯದಲ್ಲಿ ಕಾರ್ಮಿಕರಿಗೆ ಬೇಕಾಗುವ ಆಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ.

ಕಾರ್ಮಿಕರನ್ನು ಸುರಕ್ಷಿತವಾಗಿ ತಲುಪಿಸಿ ವಾಪಸ್ಸಾಗಬೇಕು. ಉತ್ತರ ಭಾರತದ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣದ ಹೆಚ್ಚಿದ್ದು, ಈ ಕುರಿತು ಜಾಗೃತಿ ವಹಿಸುವಂತೆ ಅಧಿಕಾರಿಗಳು ಚಾಲಕರಿಗೆ ಸಲಹೆ ನೀಡಿದರು. ಎಚ್‌.ರಾಮನಗೌಡ, ಅಶೋಕ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next