Advertisement

ಭಾರತದ ಲಸಿಕೆಗೆ 96 ರಾಷ್ಟ್ರಗಳ ಮಾನ್ಯತೆ; ಸಚಿವ ಮನ್‌ಸುಖ್ ಮಾಂಡವಿಯಾ

08:46 PM Nov 09, 2021 | Team Udayavani |

ನವದೆಹಲಿ: “ಭಾರತದ ಕೊರೊನಾ ಲಸಿಕೆಗಳಾದ ಕೊವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳನ್ನು ಈವರೆಗೆ ಒಟ್ಟು 96 ರಾಷ್ಟ್ರಗಳು ಮಾನ್ಯತೆ ನೀಡಿವೆ” ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ತಿಳಿಸಿದ್ದಾರೆ.

Advertisement

“ಈವರೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾದ ಎಂಟು ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ಅದರಲ್ಲಿ ಎರಡು ಲಸಿಕೆಗಳು ಭಾರತದವು. ಈಗಾಗಲೇ 96 ರಾಷ್ಟ್ರಗಳು ನಮ್ಮ ಲಸಿಕೆಗಳಿಗೆ ಮಾನ್ಯತೆ ನೀಡಿ, ಆ ಲಸಿಕೆ ಪಡೆದವರಿಗೆ ತಮ್ಮ ರಾಷ್ಟ್ರಕ್ಕೆ ಬರಲು ಅನುಮತಿ ನೀಡಿವೆ. ಇನ್ನುಳಿದ ರಾಷ್ಟ್ರಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಯು.ಕೆ. ಅನುಮತಿ:
ಭಾರತ್‌ ಬಯೋಟೆಕ್‌ ಸಂಸ್ಥೆ ತಯಾರಿಸಿರುವ ಕೊವ್ಯಾಕ್ಸಿನ್‌ ಲಸಿಕೆಗೆ ಯು.ಕೆ. ಸರ್ಕಾರ ಅನುಮತಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್‌ ಸೇರ್ಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ಇದನ್ನೂ ಓದಿ:ಗಾರೆ ಕಾರ್ಮಿಕನಿಗೆ ಚಾಕು ಇರಿದ ದುಷ್ಕರ್ಮಿ : ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು

10 ಸಾವಿರ ಹೊಸ ಕೇಸ್‌:
ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆಯವರೆಗೆ ಭಾರತದಲ್ಲಿ ಒಟ್ಟು 10,126 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದು ಕಳೆದ 266 ದಿನಗಳಲ್ಲೇ ಅತ್ಯಂತ ಕಡಿಮೆ ಏಕದಿನ ಪ್ರಕರಣವಾಗಿದೆ. ಇದೇ ವೇಳೆ 332 ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next