Advertisement

96 ಭ್ರಷ್ಟ ಅಧಿಕಾರಿಗಳಿಗೆ ಗೇಟ್‌ ಪಾಸ್‌

09:46 AM Nov 29, 2019 | Sriram |

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಸುಮಾರು 96 ಭ್ರಷ್ಟ ಸರಕಾರಿ ಅಧಿಕಾರಿಗಳಿಗೆ ಗೇಟ್‌ ಪಾಸ್‌ ನೀಡಲಾಗಿದೆ ಎಂದು ರಾಜ್ಯಸಭೆ ಗುರುವಾರ ಮಾಹಿತಿ ನೀಡಿದೆ

Advertisement

ಜುಲೈ, 2014 ರಿಂದ 2019ರ ಅಕ್ಟೋಬರ್‌ ಅವಧಿಯ ವರೆಗೆ ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಒಟ್ಟು 96 ಗುಂಪು “ಎ’ ಅಧಿಕಾರಿಗಳ ವಿರುದ್ಧ ಮೂಲಭೂತ ನಿಯಮ 56(ಜೆ) ಅನ್ವಯ ನಿವೃತ್ತಿ ಅವಧಿಗೂ ಮುನ್ನವೇ ಹುದ್ದೆಯಿಂದ ಹೊರಹಾಕಲಾಗಿದೆ ಎಂದು ರಾಜ್ಯ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಮೂಲಭೂತ ನಿಯಮ 56 (ಜೆ) ಮತ್ತು ಕೇಂದ್ರ ನಾಗರಿಕ ಸೇವೆಗಳ ನಿಯಮ 48 ರ ನಿಬಂಧನೆಯ ಅನ್ವಯ ಅನುಚಿತವಾಗಿ ನಡೆದುಕೊಂಡ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದು ಹಾಕುವ ಸಂಪೂರ್ಣ ಹಕ್ಕ ಸರಕಾರಕ್ಕಿದ್ದು, ಸಾರ್ವಜನಿಕರ ಹಿತದೃಷ್ಟಿಗೆ ವಿರುದ್ಧವಾಗಿ ನಡೆದುಕೊಂಡ ಹಾಗೂ ಸಮಗ್ರ ಮತ್ತು ನಿಷ್ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಹಿನ್ನಲೆ 96 ಸರಕಾರಿ ಅಧಿಕಾರಿಗಳಿಗೆ ಗೇಟ್‌ಪಾಸ್‌ ನೀಡಲಾಗಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next