Advertisement

Gadag; ಕರಿಯಮ್ಮದೇವಿಯ 95ನೇ ಜಾತ್ರಾಮಹೋತ್ಸವ ಏ. 8ರಿಂದ ಆರಂಭ

12:12 PM Apr 06, 2024 | Team Udayavani |

ಗದಗ: ಕರಿಯಮ್ಮಕಲ್ಲು ಬಡಾವಣೆ ಸುಧಾರಣಾ ಸಮಿತಿ ವತಿಯಿಂದ ನಗರದ ಕರಿಯಮ್ಮದೇವಿಯ 95ನೇ ಜಾತ್ರಾ ಮಹೋತ್ಸವವನ್ನು ಏ. 8ರಿಂದ 10ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಎಲ್.ಡಿ. ವಂದಾವರಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 8ರಂದು ಬೆಳಿಗ್ಗೆ 10ಕ್ಕೆ ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿ ದರ್ಶನಕ್ಕೆ ಇಡಲಾಗುವುದು. ನಂತರ ರಂಗೋಲಿ ಸ್ಪರ್ಧೆ, 11ಕ್ಕೆ ಚಿತ್ರಕಲಾ ಸ್ಪರ್ಧೆ, 11.30ಕ್ಕೆ ವಚನ ಗಾಯನ ಸ್ಪರ್ಧೆ ನಡೆಯಲಿದೆ ಎಂದರು.

ಏ. 8ರಂದು ಸಂಜೆ 6ಕ್ಕೆ ಜಾತ್ರಾ ಪ್ರಾರಂಭೋತ್ಸವ ನೆರವೇರಲಿದ್ದು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಗರಸಭೆ ಸದಸ್ಯರಾದ ವಿಜಯಲಕ್ಷ್ಮಿ ದಿಂಡೂರ, ಶ್ವೇತಾ ಬೆನಕವಾರಿ ಪಾಲ್ಗೊಳ್ಳುವರು ಎಂದು ಹೇಳಿದರು.

ಏ. 9ರಂದು ಮಧ್ಯಾಹ್ನ 2.30ಕ್ಕೆ ಸಕಲ ಮಂಗಳ ವಾದ್ಯಗಳೊಂದಿಗೆ ಕರಿಯಮ್ಮದೇವಿ ಪಾಲಕಿ ಉತ್ಸವ ನೆರವೇರಲಿದೆ. ಜಾತ್ರಾ ಸಮಿತಿ ಅಧ್ಯಕ್ಷ ಜಗದೀಶ ಪೂಜಾರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಈಶಣ್ಣ ಮುನವಳ್ಳಿ, ಕಾಮನಳ್ಳಿ ಎಂ.ಎನ್. ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ನಂತರ ಕೊತಬಾಳದ ಅರುಣೋದಯ ಜಾನಪದ ಕಲಾತಂಡದ ಶಂಕರಪ್ಪ ಸಂಕಣ್ಣವರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಏ. 10ರಂದು ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಕಡುಬಿನ ಕಾಳಗ, 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಮಾಳಶೆಟ್ಟಿ, ಮಂಜುನಾಥ ಪೂಜಾರ ಹಾಗೂ ಗೋವಿಂದಪ್ಪ ಗೌಡಪ್ಪಗೋಳ ಪಾಲ್ಗೊಳ್ಳುವರು ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ, ಮುಖಂಡರಾದ ಸಿ.ಕೆ. ಮಾಳಶೆಟ್ಟಿ, ಶಶಿಧರ ದಿಂಡೂರ, ಬಸವರಾಜ ನರೇಗಲ್, ಜಗದೀಶ್ ಪೂಜಾರ, ಶಂಕರ ಹಾನಗಲ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next