Advertisement

9,55,943 ಮನೆ ಮಂಜೂರು: ಸೋಮಣ್ಣ

11:18 PM Mar 16, 2020 | Lakshmi GovindaRaj |

ವಿಧಾನಸಭೆ: ರಾಜ್ಯದಲ್ಲಿ 2017 ರಿಂದ ವಾಜಪೇಯಿ, ಬಸವ , ಅಂಬೇಡ್ಕರ್‌ ಸೇರಿ ವಿವಿಧ ವಸತಿ ಯೋಜನೆಗಳಡಿ 9,55,943 ಮನೆಗಳನ್ನು ಮಂಜೂರು ಮಾಡಲಾಗಿದ್ದು, ಇತ್ತೀಚೆಗಷ್ಟೇ 39 ಸಾವಿರ ಮನೆಗಳಿಗೆ 183 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ವೇದ ವ್ಯಾಸ್‌ ಕಾಮತ್‌ ಪ್ರಶ್ನೆಗೆ ಉತ್ತರಿಸಿ, ಸಾಕಷ್ಟು ಕಾಲಾವಕಾಶ ನೀಡಿದರೂ ಪ್ರಾರಂಭಗೊಳ್ಳದ 2,74,253 ಮನೆ ಬ್ಲಾಕ್‌ ಮಾಡಲಾಗಿತ್ತು ನಂತರ ಸಚಿವ ಸಂಪುಟದಲ್ಲಿ ಬ್ಲಾಕ್‌ ಆಗಿರುವ ಎಲ್ಲ ಮನೆ ಆನ್‌ಬ್ಲಾಕ್‌ ಮಾಡಿ 1 ತಿಂಗಳು ಕಾಲಾವಕಾಶ ನೀಡಿ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಮಾರ್ಚ್‌ ಅಂತ್ಯದವರೆಗೂ ಕಾಲಾವಕಾಶ ಇದೆ ಎಂದು ಹೇಳಿದರು.

ಮನೆಗಳು ಪೂರ್ಣಗೊಂಡ ನಂತರ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ರವಾನಿ ಸಿದ ತಕ್ಷಣ ಹಣ ಆರ್‌ಟಿಜಿಎಸ್‌ ಮೂಲಕ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ನ ಶಿವಾನಂದ ಪಾಟೀಲ್‌, ಯು.ಟಿ.ಖಾದರ್‌ ಸೇರಿ ಹಲವು ಸದಸ್ಯರು, ವಸತಿ ಯೋಜನೆಗಳಡಿ ಫ‌ಲಾನುಭವಿಗಳ ಪಾಲಿನ ಹಣ ಹೊಂದಿಸುವುದು ಬಡವರಿಗೆ ಕಷ್ಟವಾ ಗುತ್ತಿದೆ. ಬ್ಯಾಂಕುಗಳ ಮೂಲಕ ಅವ ರಿಗೆ ಸಾಲದ ವ್ಯವಸ್ಥೆ ಮಾಡಿ ಸಬೇಕು ಎಂದು ಒತ್ತಾಯಿಸಿದರು. ಉಡುಪಿಯಲ್ಲಿ ಬರೋಡಾ ಬ್ಯಾಂಕ್‌ ಸಾಲ ನೀಡಲು ಮುಂದಾಗಿದೆ. ಆದರೆ, ಇತರೆ ಜಿಲ್ಲೆಗಳಲ್ಲಿ ಬ್ಯಾಂಕ್‌ನವರು ಮುಂದಾಗುತ್ತಿಲ್ಲ, ಈ ಕುರಿತು ಬ್ಯಾಂಕ್‌ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next