ಲಕ್ನೋ: ಶೇ.95ರಷ್ಟು ಭಾರತೀಯರಿಗೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಅಗತ್ಯವಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ನಾಲ್ಕು ಚಕ್ರದ ವಾಹನ ಉಪಯೋಗಿಸುತ್ತಾರೆ…ಇದು ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ಅವರ ಪ್ರತಿಕ್ರಿಯೆ.
ಇದನ್ನೂ ಓದಿ:ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ
ಪಶ್ಚಿಮ ಉತ್ತರಪ್ರದೇಶದ ಜಲ್ವಾನ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ವಿರುದ್ಧಮುಗಿಬೀಳಲು ವಿಪಕ್ಷಗಳ ಬಳಿ ಯಾವುದೇ ವಿಷಯಗಳಿಲ್ಲ. ನೀವು 2014ಕ್ಕೂ ಮೊದಲು ಮತ್ತು ಈಗಿನ ಅಂಕಿಅಂಶವನ್ನು ಪರಿಶೀಲಿಸಿ. ಮೋದಿಜೀ ಮತ್ತು ಯೋಗಿಜಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಲಾ ಆದಾಯ ದ್ವಿಗುಣಗೊಂಡಿದೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ನಾಲ್ಕು ಚಕ್ರದ ವಾಹನ ಬಳಸುತ್ತಿದ್ದು, ಅವರಿಗೆ ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ ಎಂದು ತಿವಾರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಾಜ್ಯದ ರಾಜಧಾನಿ ಲಕ್ನೋದಲ್ಲಿ ಜನರು ಲೀಟರ್ ಪೆಟ್ರೋಲ್ ಗೆ 103.18 ರೂಪಾಯಿ ನೀಡಬೇಕಾಗಿದೆ. ಆದರೆ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ ಇದಕ್ಕಿಂತ ಹೆಚ್ಚು. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 112.44 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 103.26 ರೂಪಾಯಿಗೆ ಏರಿಕೆಯಾಗಿದೆ.