Advertisement
ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7268 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 93 ಸೋಂಕಿತರು ಮೃತಪಟ್ಟಿದ್ದಾರೆ.
Related Articles
Advertisement
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ರಾಜಿನಾಮೆ
ಇನ್ನುಳಿದಂತೆ, ಮೈಸೂರು (591), ಬಳ್ಳಾರಿ (677), ದಾವಣಗೆರೆ (257), ಹಾಸನ (206), ಶಿವಮೊಗ್ಗ (218), ಬೆಳಗಾವಿ (295), ದಕ್ಷಿಣ ಕನ್ನಡ (308), ರಾಯಚೂರು (227), ಧಾರವಾಡ (247), ಬಾಗಲಕೋಟೆ (234), ಕಲಬುರಗಿ (175), ಚಿಕ್ಕಮಗಳೂರು (112), ಉಡುಪಿ (120), ಮಂಡ್ಯ (86), ಚಿತ್ರದುರ್ಗ (152), ಉತ್ತರ ಕನ್ನಡ (127), ಕೊಪ್ಪಳ (180), ತುಮಕೂರು (381), ವಿಜಯಪುರ (107), ಹಾವೇರಿ (188), ಗದಗ (69), ಬೆಂಗಳೂರು ಗ್ರಾಮಾಂತರ (66), ಚಿಕ್ಕಬಳ್ಳಾಪುರ (102), ಕೋಲಾರ (115), ರಾಮನಗರ (42), ಯಾದಗಿರಿ (50), ಬೀದರ್ (80), ಚಾಮರಾಜನಗರ (108) ಮತ್ತು ಕೊಡಗು (47) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇಂದು ರಾಜ್ಯದಲ್ಲಿ ಒಟ್ಟು 32,913 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 39,117 ಸೋಂಕು ಪತ್ತೆ ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಡೆಸಲಾಗಿದೆ. ಈ ಮೂಲಕ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 72,030 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.
ಇದನ್ನೂ ಓದಿ: ಕೋವಿಡ್ ಹೀರೋಗಳಿಗೆ ಗೌರವ ಸಲ್ಲಿಸಲಿರುವ ಆರ್ಸಿಬಿರಾಜ್ಯದಲ್ಲಿ ಇದುವರೆಗೆ ಒಟ್ಟು 14,04,764 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಇದನ್ನು ಹೊರತಾಗಿಸಿ ರಾಜ್ಯಾದ್ಯಂತ 26,53,549 ಜನರಿಗೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಈ ಎಲ್ಲಾ ವಿಧಾನಗಳ ಮೂಲಕ ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 40,58,313 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.