Advertisement

ಸರಕಾರಕ್ಕೆ 92 ಸಾವಿರ ಕೋ. ರೂ. ಪಾವತಿಸಿ

09:56 AM Oct 26, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದೂರಸಂಪರ್ಕ ಕಂಪೆನಿಗಳು ಕೇಂದ್ರ ಸರಕಾರಕ್ಕೆ 92 ಸಾವಿರ ಕೋಟಿ ರೂ.ಗಳನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ. ನ್ಯಾ| ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ಮೂಲಕ ದೂರಸಂಪರ್ಕ ಇಲಾಖೆ ರೂಪಿಸಿದ ಹೊಂದಾಣಿಕೆ ಮಾಡಿದ ಒಟ್ಟು ಆದಾಯ (ಎಜಿಆರ್‌ )ಪಾವತಿ ಮಾಡಬೇಕು ಎಂದು ಸೂಚಿಸಿದ್ದು ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

ಎಜಿಆರ್‌ನಲ್ಲಿ ರೋಮಿಂಗ್‌ ಶುಲ್ಕ, ಟರ್ಮಿನೇಷನ್‌ ಶುಲ್ಕ, ಆದಾಯಗಳು ಒಳಗೊಂಡಿಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ಹೊಂದಾಣಿಕೆ ಮಾಡಿದ ಒಟ್ಟು ಆದಾಯ ಎಂದರೆ ಏನು ಎಂಬ ವ್ಯಾಖ್ಯೆಯ ವಿಚಾರಕ್ಕೇ ಹದಿನಾಲ್ಕು ವರ್ಷಗಳಿಂದ ಕೇಂದ್ರ ಸರಕಾರ ಮತ್ತು ದೂರಸಂಪರ್ಕ ಕಂಪೆನಿಗಳ ನಡುವೆ ಕಾನೂನು ಹೋರಾಟ ನಡೆದಿದ್ದು, ಎಜಿಆರ್‌ ವ್ಯಾಖ್ಯಾನ ಈಗಿರುವಂತೆಯೇ ಮುಂದುವರಿಯಲಿದೆ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next