Advertisement

ಸ್ಪೀಕರ್‌ ಬಾಕ್ಸ್‌ಗಳಲ್ಲಿ 92 ಚಿನ್ನದ ಬಿಸ್ಕೆಟ್‌ ಸಾಗಾಟ

11:51 AM Oct 30, 2018 | Team Udayavani |

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು, 3.40 ಕೋಟಿ ರೂ. ಮೌಲ್ಯದ ನೂರಕ್ಕೂ ಅಧಿಕ ಚಿನ್ನದ ಬಿಸ್ಕೆಟ್‌ಗಳನ್ನೊಳಗೊಂಡ 10. 36 ಕೆ.ಜಿ ವಶಪಡಿಸಿಕೊಂಡಿದ್ದಾರೆ.

Advertisement

ಈ ಪೈಕಿ ಸಿಂಗಾಪುರ ಮೂಲದ ವ್ಯಕ್ತಿಯೊಬ್ಬ ಎರಡು ಮ್ಯೂಸಿಕ್‌ ಸ್ಟೀಕರ್‌ಗಳಲ್ಲಿಟ್ಟು ತಲಾ 100 ಗ್ರಾಂ ತೂಕದ 92 ಚಿನ್ನದ ಬಿಸ್ಕೆಟ್‌ಗಳನ್ನು ಬೆಂಗಳೂರಿಗೆ ತಂದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಸ್ಟಮ್ಸ್‌ ಅಧಿಕಾರಿಗಳು ಪತ್ತೆಹಚ್ಚಿದ್ದ  ಭಾರೀ ಪ್ರಮಾಣದ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದಾಗಿದೆ.

ಭಾನುವಾರ ರಾತ್ರಿ 9-30ಕ್ಕೆ ಸಿಂಗಾಪುರದಿಂದ ಆಗಮಿಸಿದ್ದ ವಿಮಾನದಲ್ಲಿ ಸೂಟ್‌ಕೇಸ್‌ ವೊಂದು  ಸೀಟಿನ ಬಳಿಯೇ ಇತ್ತು. ಯಾರೊಬ್ಬರು ಅದನ್ನು ತೆಗೆದುಕೊಳ್ಳಲು ಮುಂದಾಗಿರಲಿಲ್ಲ. ಈ ಕುರಿತು ಸಿಬ್ಬಂದಿ ಮಾಹಿತಿ ನೀಡಿದ ಕೂಡಲೇ ಕಸ್ಟಮ್ಸ್‌ ಅಧಿಕಾರಿಗಳು ಬ್ಯಾಗ್‌ನ್ನು ಸ್ಕ್ಯಾನ್‌ ಮಾಡಿದಾಗ, ಸೂಟ್‌ಕೇಸ ಒಳಗಡೆ ಎರಡು ಲೋಹದ ವಸ್ತುಗಳು ಇರುವುದು ಕಂಡು ಬಂದಿದೆ.

ಅದನ್ನು ತೆರೆದು ಪರಿಶೀಲಿಸಿದಾಗ ಎರಡು ಕಾಟೂìನ್‌ ಬಾಕ್ಸ್‌ಗಳು ಕಂಡು ಬಂದಿವೆ. ಕಾಟೂìನ್‌ ಬಾಕ್ಸ್‌ ಓಪನ್‌ ಮಾಡಿದಾಗ ಎರಡು ಸಿ#àಕರ್‌ಗಳು ಪತ್ತೆಯಾಗಿವೆ. ಸ್ಪೀಕರ್‌ಗಳ ಕೆಳಭಾಗದಲ್ಲಿ ಸುತ್ತಿದ್ದ ಕಪ್ಪುಬಣ್ಣದ ಇನ್ಸುಲೇಶನ್‌ ಟೇಪ್‌ ತೆಗೆದಾಗ,  ಚಿನ್ನದ ಬಿಸ್ಕೆಟ್‌ಗಳು ಇರುವುದು ಕಂಡು ಬಂದಿದೆ. ಎರಡೂ ಸ್ಪೀಕರ್‌ಗಳಲ್ಲಿದ್ದ 100 ಗ್ರಾಂ ತೂಕದ 92 ಚಿನ್ನದ ಬಿಸ್ಕೆಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಚಿನ್ನದ ಮೌಲ್ಯ 3.2 ಕೋಟಿ ರೂ.ಗಳಾಗಿದೆ. ಚಿನ್ನದ ಬಿಸ್ಕೆಟ್‌ಗಳಿದ್ದ ಸೂಟ್‌ಕೇಸ್‌ ಸಿಂಗಾಪುರ ಮೂಲದ ನೂರುಲ್ಯಾನೆ ಎಂಬಾತನಿಗೆ ಸೇರಿದ್ದಾಗಿದೆ. ಆತನೇ ಸಿಂಗಾಪುರದಿಂದ ಚಿನ್ನದ ಬಿಸ್ಕೆಟ್‌ ತಂದಿದ್ದು, ವಿಮಾನ ನಿಲ್ದಾಣ ತಲುಪಿದ ಕೂಡಲೇ ಸಿಕ್ಕಿಬೀಳುವ ಭಯದಲ್ಲಿ ಸೂಟ್‌ಕೇಸ್‌ ಬಿಟ್ಟುಹೋಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಟ್ಟೆಯಲ್ಲಿ ಅಡಗಿಸಿಟ್ಟುಕೊಂಡಿದ್ರು ಚಿನ್ನದ ಬಿಸ್ಕೆಟ್‌!: ಮತ್ತೂಂದು ಪ್ರಕರಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಹ್ರೇನ್‌ನಿಂದ ಆಗಮಿಸಿದ್ದ ಚೆನೈ ಮೂಲದ ಐದು ಮಂದಿಯನ್ನು ವಶಕ್ಕೆ ಪಡೆದು ಅವರ ಲಗೇಜ್‌ ಮಾಡಿದಾಗ, ಬಟ್ಟೆಯಲ್ಲಿಟ್ಟುಕೊಂಡು ಚಿನ್ನದ ಬಿಸ್ಕೇಟ್‌ ಸಾಗಿಸುತ್ತಿರುವುದು ಕಂಡು ಬಂದಿದೆ. ಆರೋಪಿಗಳಿಂದ  38. 35 ಲಕ್ಷ ರೂ. ಮೌಲ್ಯದ 1.164 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. 

ಬಹ್ರೇನ್‌ನಿಂದ ಆಗಮಿಸಿದ ಅಲಿ,ಅಬ್ದುಲ್‌ ಕದೀರ್‌, ನಾಗೂರ್‌ ಮೆವಾನ್‌,  ಸತೀಕ್‌ ಬಚ್ಚಾ,  ಶಾಹೂಲ್‌ ಹಮೀದ್‌  ತಲಾ 233.28 ಗ್ರಾಂ ಚಿನ್ನದ ಬಿಸ್ಕೆಟ್‌ಗಳನ್ನು ತಮ್ಮ ಬಟ್ಟೆಗಳಲ್ಲಿಟ್ಟುಕೊಂಡು ಆಗಮಿಸಿದ್ದರು. ಅವರನ್ನು ಪರಿಶೀಲಿಸಿದಾಗ ಅಕ್ರಮ ಚಿನ್ನ ಸಾಗಾಟ ಬೆಳಕಿಗೆ ಬಂದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next