Advertisement

ಆಮೆಯ ಹೊಟ್ಟೆಯಲ್ಲಿ  915 ನಾಣ್ಯಗಳು ಪತ್ತೆ!

03:45 AM Mar 07, 2017 | |

ಬ್ಯಾಂಕಾಕ್‌: ಥಾಯ್ಲೆಂಡ್‌ನ‌ ಶ್ರೀರಾಚ ಪಟ್ಟಣದಲ್ಲಿ “ಬ್ಯಾಂಕ್‌’ ಹೆಸರಿನ ಆಮೆಯೊಂದರ ಹೊಟ್ಟೆ ಸೇರಿದ್ದ 915 ನಾಣ್ಯಗಳನ್ನು ಐವರು ಪಶು ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದೆ.

Advertisement

25 ವರ್ಷ ವಯಸ್ಸಿನ ಬ್ಯಾಂಕ್‌ ವಾಸವಿದ್ದ ಕೊಳಕ್ಕೆ ನಾಣ್ಯ ಹಾಕಿದರೆ ಆಯಸ್ಸು ಹೆಚ್ಚಾಗುತ್ತದೆಂಬುದು ಇಲ್ಲಿನ ಭಕ್ತರ ನಂಬಿಕೆ. ಹೀಗೆ ಭಕ್ತರು ಹಾಕಿದ ನಾಣ್ಯಗಳನ್ನು ನುಂಗುತ್ತಿದ್ದ ಬ್ಯಾಂಕ್‌ಗೆ ಒಮ್ಮೆ ಅಜೀರ್ಣವಾಗಿ ಅನಾರೋಗ್ಯ ಉಂಟಾಗಿದೆ. ಬಳಿಕ ಅದನ್ನು ಚುಲಾಲೊಂಗಾRರ್ನ್ ವಿಶ್ವವಿದ್ಯಾಲಯದ ಪಶು ವೈದ್ಯರಿಂದ 3ಡಿ ಸ್ಕ್ಯಾನ್‌ ಮಾಡಿಸಿದಾಗ 915 ನಾಣ್ಯಗಳು ಮತ್ತು 2 ಮೀನಿನ ಮೂಳೆಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next