ಲಭ್ಯವಾಗಿದೆ. ಬಳ್ಳಾರಿ ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲು ರಾಜ್ಯ ಸರ್ಕಾರ 100 ಕೋಟಿ ರೂ.
ನಿಗದಿಪಡಿಸಿತ್ತು. ಈ ಮಿತಿಯೊಳಗೆ 2017ರ ಆ.17ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಜರುಗಿದ್ದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಕ್ರಿಯಾ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದರಿಂದ ಗಣಿ ಬಾಧಿ ತ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಖನಿಜ ನಿಧಿಯ ಬಳಕೆಯಲ್ಲಿ ರಾಜ್ಯ ಸರ್ಕಾರ ದೇಶದ ಇತರೆ ಗಣಿಗಾರಿಕೆ ಆಧಾರಿತ
ರಾಜ್ಯಗಳಾದ ಜಾರ್ಖಂಡ್, ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಗಿಂತ ಹಿಂದೆ ಬಿದ್ದಿತ್ತು.
Advertisement
ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ ಎನ್ನುವ ಆಪಾದನೆಗೆ ಗುರಿಯಾಗಿತ್ತು. ಈ ಮಹತ್ವದ ಆದೇಶದಿಂದ ರಾಜ್ಯ ಸರ್ಕಾರ ಎಲ್ಲ ಆಪಾದನೆಗಳಿಂದ ಮುಕ್ತಿ ಪಡೆದಂತಾಗಿದೆ. ಇದರಿಂದ ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಗಣಿಬಾಧಿತ ತಾಲೂಕುಗಳಾದ ಬಳ್ಳಾರಿ, ಸಂಡೂರು ಹಾಗೂ ಹೊಸಪೇಟೆ ತಾಲೂಕುಗಳ ಅಭಿವೃದ್ಧಿಗೆ ಶೇ.60ರಷ್ಟು ಉಳಿದ ಮೊತ್ತ ಜಿಲ್ಲೆಯ ಉಳಿದ ಶೇ.40ರಷ್ಟು ನಿಧಿಯನ್ನು ಉಳಿದ ತಾಲೂಕುಗಳ ಅಭಿವೃದ್ಧಿಗೆ ದೊರೆಯಲಿದೆ.