Advertisement

ತಬ್ಬಲಿಯಾದವು 9 ಸಾವಿರ ಮಕ್ಕಳು: ಕೋವಿಡ್ ನಿಂದ ಕರ್ನಾಟಕದ 36 ಸೇರಿ 9,346 ಮಕ್ಕಳು ಅನಾಥ

07:08 AM Jun 02, 2021 | Team Udayavani |

ಹೊಸದಿಲ್ಲಿ: ಕೊರೊನಾದಿಂದಾಗಿ, ಕರ್ನಾ ಟಕದ 36 ಸೇರಿ ದೇಶಾದ್ಯಂತ ಸುಮಾರು 9,346 ಮಕ್ಕಳು ಅನಾಥರಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ. ಅಲ್ಲದೆ ಇಂಥ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರಕ್ಕೆ ನೀಡ ಬಹುದಾದ ಆರು ಶಿಫಾರಸುಗಳನ್ನು ನ್ಯಾಯಾಲ ಯದ ಮುಂದಿಟ್ಟಿದೆ.

Advertisement

ಕಳೆದ ವಾರ ಕೊರೊನಾದಿಂದ ಅನಾಥರಾದ ಮಕ್ಕಳ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಹಾಗೂ ಎನ್‌ಸಿಪಿಸಿಆರ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಬಾಲ ಸ್ವರಾಜ್‌ ಸಂಸ್ಥೆ ಸಿದ್ಧಪಡಿಸಿರುವ ಈ ಸಮೀಕ್ಷ ವರದಿಯಲ್ಲಿ, 2020ರ ಮಾರ್ಚ್‌ನಿಂದ 2021ರ ಮೇ 29ರ ವರೆಗೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ದೇಶದಲ್ಲಿ 9,346 ಮಕ್ಕಳು ಪೋಷಕರ ಆಸರೆ ಕಳೆದುಕೊಂಡಿದ್ದಾರೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡವರ ಸಂಖ್ಯೆ 1,742ರಷ್ಟಿದ್ದು, ಒಬ್ಬ ಹೆತ್ತವರನ್ನು ಕಳೆದು ಕೊಂಡವರ ಸಂಖ್ಯೆ 7,464ರಷ್ಟಿದೆ. ಇವರಲ್ಲಿ 1,224 ಮಕ್ಕಳು ಕಾನೂನು ಪ್ರಕಾರ ಪೋಷಕ ಹಕ್ಕುಗಳನ್ನು ಪಡೆದಿ ರುವ ಸಂಬಂಧಿಕರ ಜತೆಗೆ ಜೀವಿಸು ತ್ತಿದ್ದರೆ, 985 ಮಕ್ಕಳು ಕಾನೂನಿನ ಮಾನ್ಯತೆ ಪಡೆದಿರದ ಸಂಬಂಧಿಕರ ಜತೆಗಿದ್ದಾರೆ. 6,612 ಮಕ್ಕಳು ಒಬ್ಬ ಹೆತ್ತವರೊಂದಿಗೆ ಜೀವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಎನ್‌ಸಿಪಿಸಿಆರ್‌ನ ಪ್ರಮುಖ ಶಿಫಾರಸುಗಳು
1. ಹೆತ್ತವರಲ್ಲಿ ಒಬ್ಬರು ಅಥವಾ ಇಬ್ಬರೂ ಇಲ್ಲವಾಗಿದ್ದಲ್ಲಿ ಅಥವಾ ಕುಟುಂಬದ ದುಡಿಯುವ ವ್ಯಕ್ತಿಯು ಕೊರೊನಾಕ್ಕೆ ಬಲಿಯಾಗಿದ್ದಲ್ಲಿ ಆ ಮಕ್ಕಳ ಎಲಿಮೆಂಟರಿ ಶಿಕ್ಷಣದ ಹೊರೆಯನ್ನು 2009ರ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ಸಂಬಂಧಿಸಿದ ರಾಜ್ಯ ಸರಕಾರವೇ ಹೊರಬೇಕು. ಮಕ್ಕಳು ಖಾಸಗಿ ಶಾಲೆಯಲ್ಲಿದ್ದರೂ ಅವರ ಜವಾಬ್ದಾರಿ ಸಂಬಂಧಪಟ್ಟ ರಾಜ್ಯ ವಹಿಸಿಕೊಳ್ಳಬೇಕು.

2. ಈ ಸೌಲಭ್ಯ ಮಕ್ಕಳಿಗೆ ಸಿಗುವಂತೆ ಮಾಡಲು ಅನಾಥರಾದ ಮಕ್ಕಳ ಪೋಷಕರು, ತಾವಿರುವ ಜಿಲ್ಲೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯನ್ನು (ಸಿಡಬ್ಲ್ಯುಸಿ) ಸಂಪರ್ಕಿಸಬೇಕು. ಸಮಿತಿಯ ಶಿಫಾರಸಿನ ಮೇರೆಗೆ ಮಕ್ಕಳನ್ನು ಆರ್‌ಟಿಇ ವ್ಯಾಪ್ತಿಗೊಳಪಡಿಸಿ ರಾಜ್ಯ ಸರಕಾರಗಳು ಶಿಕ್ಷಣದ ಖರ್ಚನ್ನು ವಹಿಸಿ ಕೊಳ್ಳಬಹುದು. 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಈ ಕ್ರಮ ಅನ್ವಯ.

Advertisement

3. 8ನೇ ತರಗತಿ ದಾಟಿದ ಮಕ್ಕಳ ಶಿಕ್ಷಣ ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲವಾದ್ದ ರಿಂದ, ಆ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರಗಳು ತಮ್ಮ ವ್ಯಾಪ್ತಿಯಲ್ಲಿನ ಸರಕಾರಿ ಅಥವಾ ಖಾಸಗಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಅಂಥ ಮಕ್ಕಳ ಶಿಕ್ಷಣದ ಖರ್ಚನ್ನು ಕೇಂದ್ರ ಸರಕಾರ ಈಗಾಗಲೇ ಘೋಷಿಸಿರುವಂತೆ ಪಿಎಂ-ಕೇರ್ಸ್‌ ವತಿಯಿಂದ ನಿಭಾಯಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next