Advertisement

ರಾಜ್ಯದಲ್ಲಿದೆ 900 ಟನ್‌ ಬಂಗಾರದ ನಿಕ್ಷೇಪ!

11:51 PM Mar 05, 2022 | Team Udayavani |

ಬೆಂಗಳೂರು: ದೇಶದಲ್ಲಿರುವ ಅಮೂಲ್ಯ ಲೋಹ ನಿಕ್ಷೇಪ ಶೋಧನೆಗೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

Advertisement

ನಗರದಲ್ಲಿ ಹಮ್ಮಿಕೊಂಡಿದ್ದ ಸೌತ್‌ ಜುವೆಲರಿ ಶೋ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಸುಮಾರು 900 ಟನ್‌ಗಳಷ್ಟು ಬಂಗಾರದ ಲೋಹದ ನಿಕ್ಷೇಪ ಇದೆ ಎಂದು ಅಂದಾಜಿಸಲಾಗಿದ್ದು, ಕಾಪರ್‌, ಅಲ್ಯೂಮಿನಿಯಂನ ನಿಕ್ಷೇಪಗಳ ಶೋಧನೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಗುರುತಿಸಲಾಗಿರುವ ಬಂಗಾರದ ನಿಕ್ಷೇಪಗಳ ಹರಾಜಿಗೆ ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆಯ ಅನಂತರ ಉತ್ತಮ ಗುಣಮಟ್ಟದ ಬಂಗಾರ ಹೊರತಗೆಯುವ ಭರವಸೆ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಸುಮಾರು 900 ಟನ್‌ಗಳಷ್ಟು ಬಂಗಾರದ ನಿಕ್ಷೇಪ ಇರುವ ಬಗ್ಗೆ ಅಂದಾಜಿಸಲಾಗಿದ್ದು, ಅದನ್ನು ಭೂಗರ್ಭದಿಂದ ತಗೆದು ಮಾರುಕಟ್ಟೆಗೆ ತರುವ ಪ್ರಯತ್ನ ಸಾಗಿದೆ. ಇದೇ ರೀತಿ ನಮ್ಮ ಹತ್ತಿರ ಬಹಳ ತಾಮ್ರದ ನಿಕ್ಷೇಪಗಳೂ ಇದ್ದು, ಅವುಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿ ಅವರು ಉಪಸ್ಥಿತರಿದ್ದರು.

ಹೊಸದಾಗಿ 14 ಏಮ್ಸ್‌
ಸ್ಥಾಪನೆ: ಜೋಶಿ
ಧಾರವಾಡ: ಪ್ರತಿ ಎರಡು ಜಿಲ್ಲೆಗಳ ನಡುವೆ ವೈದ್ಯಕೀಯ ಕಾಲೇಜು ಆರಂಭಿಸುವ ಯೋಜನೆಯಿದ್ದು, ಇದರ ಜತೆಗೆ ದೇಶದಲ್ಲಿ ಹೊಸದಾಗಿ 14 ಏಮ್ಸ್‌ ಆರಂಭಿಸುವ ಉದ್ದೇಶವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಶನಿವಾರ ಎಸ್‌ಡಿಎಂ ದಂತ ಮಹಾವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕೃತಕ ದಂತ ವಿಭಾಗದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next