Advertisement

ಹಾಸನ ಜಿಲ್ಲೆಯಲ್ಲಿ ಶೇ.90 ಲಾಕ್‌ಡೌನ್

04:10 PM Mar 30, 2020 | Suhan S |

ಹಾಸನ: ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಬೀದಿಗಿಳಿಯುತ್ತಿದ್ದ ಜನರನ್ನು ನಿಯಂತ್ರಿಸಲು ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಜಾರಿಗೊಳಿಸಿದ್ದರ ಪರಿಣಾಮ ಭಾನುವಾರ ಹಾಸನ ನಗರದಲ್ಲಿ ಶೇ.90ರಷ್ಟು ಲಾಕ್‌ಡೌನ್‌ ಪರಿಸ್ಥಿತಿ ಇತ್ತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹಾಲು, ತರಕಾರಿ ಖರೀದಿಗೆ ಬೆಳಗ್ಗೆ 6 ರಿಂದ 8 ಗಂಟೆ ವರೆಗೆ, ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ದಿನಸಿ ಅಂಗಡಿಗಳಲ್ಲಿ ವಹಿವಾಟು ಹಾಗೂ ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳನ್ನು ದಿನವಿಡೀ ತೆರೆದಿರ ಬಹುದೆಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಮುಖ್ಯವಾಗಿ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ಪೆಟ್ರೋಲ್‌ ನೀಡಬೇಕು. ಸಾರ್ವಜನಿಕರಿಗೆ ಪೆಟ್ರೋಲ್‌ ನೀಡಬಾರದು ಎಂಬ ನಿರ್ಧಾರದ ಹಿನ್ನೆಲೆ ಯಲ್ಲಿ ಭಾನುವಾರ ವಾಹನಗಳ ಸಂಚಾರ ಬಹುತೇಕ ಸ್ಥಗಿತವಾಗಿತ್ತು.

ವಾಹನ ಸಂಚಾರ ಇಳಿಮುಖ: ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರವನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು. ಪೆಟ್ರೋಲ್‌ಬಂಕ್‌ಗಳ ಮೇಲೆ ಶನಿವಾರ ಮಧ್ಯಾಹ್ನದಿಂದಲೇ ನಿರ್ಬಂಧ ವಿಧಿ ಸಿದ್ದರಿಂದ ಭಾನುವಾರ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರ ಶೇ.90ರಷ್ಟು ಸ್ಥಗಿತವಾಗಿತ್ತು. ಎಪಿಎಂಸಿ ಆವರಣದಲ್ಲಿ ತರಕಾರಿ ಸಗಟು ವ್ಯಾಪಾರವೂ ಸ್ಥಗಿತವಾಗಿದೆ. ಹಾಗಾಗಿ ಭಾನುವಾರ ಪೊಲೀಸರು ನಿರಾಳ ವಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ವಾಹನ ಸಂಚಾರ, ಜನ ಸಂಚಾರ ವಿರಳವಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಅಲ್ಲಿಯೂ ಜನ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next