Advertisement

America; 90 ಅಡಿ ಎತ್ತರದ ಹನುಮ ಮೂರ್ತಿ

01:34 AM Aug 23, 2024 | Team Udayavani |

ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ ನಗರ ದಲ್ಲಿ 90 ಅಡಿ ಎತ್ತರದ ಬೃಹತ್‌ ಕಂಚಿನ ಪ್ರತಿಮೆ ಅನಾವರಣ ಮಾಡಲಾ ಗಿದೆ. ಸುಗರ್‌ಲ್ಯಾಂಡ್‌ದ ಅಷ್ಟಲಕ್ಷ್ಮೀ ದೇಗುಲದ ಆವರಣದಲ್ಲಿರುವ ಈ ಪ್ರತಿಮೆಗೆ “ಯೂನಿಯನ್‌ ಸ್ಟಾಚ್ಯೂ  ಎಂದು ಹೆಸರಿಸಲಾಗಿದೆ.

Advertisement

ಸೀತೆ ಮತ್ತು ಶ್ರೀರಾಮ ನನ್ನು ಮತ್ತೆ ಒಗ್ಗೂ ಡಿಸಿದ್ದರಿಂದ ಈ ಹೆಸರನ್ನು ಇಡ ಲಾ ಗಿದೆ. ಭಾರತದಿಂದ ಹೊರಕ್ಕೆ ಪ್ರತಿ ಷ್ಠಾಪಿಸ ಲಾಗಿರುವ ಅತ್ಯಂತ ಬೃಹತ್‌ ಹನುಮಾನ್‌ ಮೂರ್ತಿ ಯಾಗಿದೆ. ವೇದ ವಿದ್ವಾಂಸ, ಸಂತ ಶ್ರೀಚಿನ್ನ ಜೀಯರ್‌ ಸ್ವಾಮಿಗಳ ಪರಿಕಲ್ಪನೆಯಡಿ ಅಂಗವಾಗಿ ಈ ಪ್ರತಿಮೆ ಅನಾ ವರಣ  ಆಗಿದೆ. ಭಾರತದಲ್ಲಿ ಸ್ವಾತಂತ್ರ್ಯ ದಿನಾ ಚರಣೆ ನಡೆಯುತ್ತಿ ದ್ದಾಗಲೇ ವಿಗ್ರಹದ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮ ಆರಂಭ ಗೊಂಡಿದ್ದು ಆ.18ಕ್ಕೆ ಮುಕ್ತಾಯವಾಗಿದೆ.

ಅಮೆರಿಕದಲ್ಲಿ 3ನೇ ಎತ್ತರದ ಪ್ರತಿಮೆ
ಸ್ಟಾಚ್ಯು ಆಫ್ ಲಿಬರ್ಟಿ (151 ಅಡಿ) ಅಮೆರಿಕದ ಎತ್ತರದ ಪ್ರತಿಮೆ. ಹಾಲಂಡೇಲ್‌ ಬೀಚ್‌ನ ಪೆಗಾಸಸ್‌ ಆ್ಯಂಡ್‌ ಡ್ರ್ಯಾಗನ್‌ (110 ಅಡಿ) 2ನೇ ಎತ್ತರದ ಪ್ರತಿಮೆ. 3ನೇ ಸ್ಥಾನ ಹನುಮ ಮೂರ್ತಿಗೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next