ಚೆನ್ನೈ: ಅಪ್ಪನ ಮಾತಿಗೆ ಮನನೊಂದು 9 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ ನಲ್ಲಿ ಸೋಮವಾರ ( ಮಾ.27) ನಡೆದಿರುವುದು ವರದಿಯಾಗಿದೆ.
ಮನೆಯ ಬಳಿ ಆಡುತ್ತಿದ್ದ ಮಗಳಿಗೆ ತಂದೆ ಕೃಷ್ಣಮೂರ್ತಿ ಆಡಿದ್ದು ಸಾಕು ಈಗ ಹೋಗಿ ಮನೆಯಲ್ಲಿ ಓದು ಎಂದು ಹೇಳಿ ಮಗಳ ಕೈಯಲ್ಲಿ ಮನೆಯ ಕೀಕೊಟ್ಟು ಕೆಲಸಕ್ಕೆ ಹೋಗಿದ್ದಾರೆ. ಸಂಜೆ 8:15 ರ ಹೊತ್ತಿಗೆ ಮನೆಗೆ ಬಂದು ಮಗಳ ಬಳಿ ಬಾಗಿಲು ತೆಗಿ ಎಂದು ಹೇಳಿದ್ದಾರೆ. ಎಷ್ಟು ಕರೆದರೂ ಅತ್ತಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣದಿಂದ ಕಿಟಕಿಯನ್ನು ಒಡೆದು ಮನೆಯೊಳಗೆ ಕೃಷ್ಣಮೂರ್ತಿ ಹೋಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ
ಒಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿದ್ದಾಳೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ಧಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡು ಸ್ವಲ್ಪ ಖ್ಯಾತಿಯಾಗಿದ್ದ ಬಾಲಕಿಯನ್ನು ಅಕ್ಕಪಕ್ಕದವರು ʼಇನ್ಸ್ಟಾ ಕ್ವೀನ್ʼ ಎಂದೇ ಕರೆಯುತ್ತಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.