Advertisement

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

05:20 PM Jan 07, 2025 | Team Udayavani |

ಅಹ್ಮದಾಬಾದ್: ಸೋಮವಾರ ಮುಂಜಾನೆ ಗುಜರಾತ್​ನ ಕಛ್ ಜಿಲ್ಲೆಯ ಗ್ರಾಮದಲ್ಲಿ 540 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 19 ವರ್ಷದ ಯುವತಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ರಾಜಸ್ಥಾನದ ವಲಸೆ ಕಾರ್ಮಿಕನ ಕುಟುಂಬಕ್ಕೆ ಸೇರಿರುವ ಇಂದ್ರಾ ಮೀನಾ ಎಂಬ ಯುವತಿ ಸೋಮವಾರ ಮುಂಜಾನೆ 540 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದು 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾಳೆ ಎನ್ನಲಾಗಿತ್ತು ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಎನ್‌ಡಿಆರ್‌ಎಫ್ , ಬಿಎಸ್‌ಎಫ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಧಾವಿಸಿ ಯುವತಿಯ ರಕ್ಷಣೆ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಆದರೆ ಘಟನೆ ನಡೆದು ಸುಮಾರು ಇಪ್ಪತ್ತನಾಲ್ಕು ಗಂಟೆಗಳು ಕಳೆದಿದ್ದು ಯುವತಿಗೆ ಪೈಪ್ ಮೂಲಕ ಆಕ್ಷಿಜನ್ ವ್ಯವಸ್ಥೆಯನ್ನು ಮಾಡಲಾಗಿತ್ತು ಆದರೆ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಿದ ವೇಳೆ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ದೇಹದಲ್ಲಿ ಯಾವುದೇ ಚಲನ ವಲನ ಇರಲಿಲ್ಲ ಎನ್ನಲಾಗಿದೆ. ಅಲ್ಲದೆ ಯುವತಿಯ ದೇಹದ ಭಾರಕ್ಕೆ ಕೊಳವೆ ಬಾವಿಯಲ್ಲಿ ಯುವತಿಯ ದೇಹ ಕೆಳಗೆ ಹೋಗುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

490 ಅಡಿ ಆಳದಲ್ಲಿ ಸಿಲುಕಿರುವ ಯುವತಿಯ ರಕ್ಷಣೆ ಕಾರ್ಯಾಚರಣೆ ಸವಾಲಿನ ಕೆಲಸವಾಗಿದೆ 490 ಅಡಿ ಆಳಕ್ಕೆ ಸಮಾನಾಂತರವಾಗಿ ಕೊಳವೆಯನ್ನು ಕೊರೆದು ದೇಹವನ್ನು ಮೇಲಕ್ಕೆ ತರುವ ಕೆಲಸ ಮಾಡಬೇಕಿದೆ ಆದರೆ ಅದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಸದ್ಯ ಘಟನಾ ಸ್ಥಳದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು ಯುವತಿಯ ದೇಹವನ್ನು ಮೇಲೆ ತರಲು ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಘಟನೆ ಕುರಿತು ಹೇಳಿಕೆ ನೀಡಿದ ಯುವತಿಯ ಸಹೋದರ ಲಾಲ್ ಸಿಂಗ್, ಸೋಮವಾರ ಮುಂಜಾನೆ ನನ್ನ ಸಹೋದರಿ ಮತ್ತು ಮಗಳು ಬಹಿರ್ದೆಸೆಗೆಂದು ಹೋಗಿದ್ದರು. ವಾಪಾಸ್‌ ಬರುವಾಗ ನನ್ನ ಮಗಳು ಮಾತ್ರ ಬಂದಿದ್ದಳು. ನನ್ನ ಸಹೋದರಿ ಬಂದಿರಲಿಲ್ಲ. ಹೀಗಾಗಿ ಹೊರಗೆ ಹೋಗಿ ಹುಡುಕಿದಾಗ ಕೊಳವೆ ಬಾವಿಯೊಳಗೆ ಸಹಾಯಕ್ಕಾಗಿ ಕಿರುಚುವುದು ಕೇಳಿತ್ತು ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Advertisement

Udayavani is now on Telegram. Click here to join our channel and stay updated with the latest news.

Next