ಕರಾಚಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿನ ಬನ್ನು ಕಂಟೋನ್ಮೆಂಟ್ ಸೆಂಟರ್‌ನಲ್ಲಿ 9 ಮಂದಿ ಸೇನಾಧಿಕಾರಿಗಳನ್ನು ಪಾಕ್ ತಾಲಿಬಾನ್ ಒತ್ತೆಯಾಗಿಟ್ಟುಕೊಂಡಿದೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಉಗ್ರ ನಿಗ್ರಹ ದಳದ ಹಲವು ಸೈನಿಕರನ್ನು ಕೊಂದು ಹಾಕಿರುವ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್ -ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ), ನಂತರ 9 ಸೇನಾಧಿಕಾರಿಗಳನ್ನು ಒತ್ತೆಯಲ್ಲಿಟ್ಟುಕೊಂಡಿದೆ ಎಂದು ಹೇಳಲಾಗಿದೆ.
ಮೃತರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭಾನುವಾರ ಏಕಾಏಕಿ ಸಿಟಿಡಿ ಕೇಂದ್ರದೊಳಗೆ ನುಗ್ಗಿದ ಬಂದೂಕುಧಾರಿ ಉಗ್ರರು, ಒಳಗೆ ವಿಚಾರಣೆಗೆಂದು ಕರೆತರಲಾಗಿದ್ದ ಟಿಟಿಪಿ ಉಗ್ರರನ್ನು ಬಿಡುಗಡೆ ಮಾಡಿದ್ದಲ್ಲದೇ, ಇಡೀ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
15-20 ಮಂದಿ ಕಟ್ಟಡದೊಳಗೇ ಇದ್ದು, “ತಮ್ಮನ್ನು ಸುರಕ್ಷಿತವಾಗಿ ಅಫ್ಘಾನಿಸ್ತಾನ ಗಡಿ ದಾಟಿಸಿದರೆ ಇವರೆಲ್ಲರನ್ನೂ ಬಿಡುಗಡೆ ಮಾಡುತ್ತೇವೆ’ ಎಂದು ಟಿಟಿಪಿ ಸಂದೇಶ ರವಾನಿಸಿದೆ.