Advertisement

ಸಿಂಘು ಗಡಿಯಲ್ಲಿ 1500 ರೈತ ಸಂಘಟನೆಗಳ ಬೃಹತ್‌ ಸಮಾವೇಶ ಆರಂಭ

09:02 PM Aug 26, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಗೆ 9 ತಿಂಗಳು ಪೂರೈ ಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತದ ರೈತ ಸಂಘಟನೆಗಳ ಸುಮಾರು 1,500 ಪ್ರತಿನಿಧಿಗಳು ಗುರುವಾರ ದೆಹ ಲಿಯ ಸಿಂಘು ಗಡಿಗೆ ತಲುಪಿದ್ದು, ಅಲ್ಲಿ ರೈತರ ಬೃಹತ್‌ ಸಮಾವೇಶ ಆರಂಭವಾಗಿದೆ. 2 ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.

Advertisement

ಭಾರತೀಯ ಕಿಸಾನ್‌ ಒಕ್ಕೂಟದ ನಾಯಕ ರಾಕೇಶ್‌ ಟೀಕಾಯತ್‌ ಅವರು ಈ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ:ಸಂತ್ರಸ್ತ ಯುವತಿಯನ್ನು ನಾನು ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ : ಸಚಿವ ಆರಗ ಜ್ಞಾನೇಂದ್ರ

ಕೃಷಿ ಕಾಯ್ದೆ ವಿರೋಧಿ ಹೋರಾಟವನ್ನು ದೇಶಾದ್ಯಂತ ಬಿರುಸುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. 9 ತಿಂಗಳಿಂದ ಹೋರಾಟ ನಡೆಸು ತ್ತಿದ್ದರೂ ಕೇಂದ್ರ ಸರ್ಕಾರವು ಮಾತುಕತೆಗೆ ಮುಂದಾಗದೇ ಇರುವುದು ನೋವಿನ ಸಂಗತಿ.ಹಾಗಂತೆ ನಾವೇನೂ ಹಿಂದೆ ಸರಿಯುವುದಿಲ್ಲ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಟೀಕಾಯತ್‌ ಘೋಷಿಸಿದ್ದಾರೆ.

22 ರಾಜ್ಯಗಳ 300ರಷ್ಟು ರೈತ- ಕೃಷಿ  ಕಾರ್ಮಿಕರ ಸಂಘಟನೆಗಳು, 18 ಅಖೀಲ ಭಾರತ ಕಾರ್ಮಿಕ ಒಕ್ಕೂಟಗಳು, 9 ಮಹಿಳಾ ಸಂಘಟ ನೆಗಳು 17 ವಿದ್ಯಾರ್ಥಿ-ಯುವ ಸಂಘಟನೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next