Advertisement

ನವಮಾಸ ಸಂಭ್ರಮ ಪ್ರಗ್ನೆಂಟ್‌ ಆದ್ರೂ ಡ್ಯಾನ್ಸ್‌ ಮಾಡ್ತಾರೆ!

05:46 AM Feb 23, 2019 | Team Udayavani |

ತಾಯ್ತನದ ಅನುಭೂತಿಯನ್ನು ವರ್ಣಿಸಲು ಪದಗಳಿಲ್ಲ. ಅದರಲ್ಲೂ ಒಡಲಲ್ಲಿ ಕುಡಿಯನ್ನಿಟ್ಟು ಪೋಷಿಸುವ “ನವಮಾಸ’ ಹೆಣ್ಣಿನ ಪಾಲಿಗೆ ಬಹಳ ಮಹತ್ವದ್ದು. ಜೋರಾಗಿ ಓಡಲು, ನಡೆಯಲು ಆಗದ, ನಿತ್ಯದ ಚಟುವಟಿಕೆಗಳನ್ನೆಲ್ಲ ನಿಧಾನವಾಗಿ ಮಾಡಬೇಕಾದ ಗರ್ಭಿಣಿಯರಿಗೆ, ಹಾಗೆ ಮಾಡಬೇಡ, ಹೀಗೆ ಮಾಡಬೇಡ ಅನ್ನುವ ಸಲಹೆಗಳು ಸಾಮಾನ್ಯ. ಇನ್ನು ನೃತ್ಯ, ನಟನೆ, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರು, ಗರ್ಭಿಣಿ ಎಂಬ ಕಾರಣಕ್ಕೆ ಚಟುವಟಿಕೆಗಳನ್ನು ನಿಲ್ಲಿಸಿಬಿಡುತ್ತಾರೆ. ಆದರೆ, ತಾಯ್ತನವನ್ನು ಎಂಜಾಯ್‌ ಮಾಡುತ್ತಲೇ, ಎಲ್ಲ ಕೆಲಸಗಳನ್ನು ಮಾಡಬಹುದು ಅಂತ ಗರ್ಭಿಣಿಯರಲ್ಲಿ ಧೈರ್ಯ ಮೂಡಿಸುವ ನೃತ್ಯ ಪ್ರದರ್ಶನ ವೊಂದು ನಗರದಲ್ಲಿ ನಡೆಯಲಿದೆ. ನೃತ್ಯಗಾತಿ ಅರಣ್ಯಿನಿ ಭಾರ್ಗವ್‌ ಮತ್ತು ತಂಡದಿಂದ “ಕ್ವೆಶ್ಚನಿಂಗ್‌ ಫ್ರಂಟಾಲಿಟಿ-ಚೇಂಜಿಂಗ್‌ ಬಾಡಿ’ ಎಂಬ ಈ ಪ್ರದರ್ಶನ ನಡೆಯಲಿದೆ.

Advertisement

ಆರು ತಿಂಗಳ ಗರ್ಭಿಣಿಯಾಗಿರುವ  ಅರಣ್ಯಿನಿ ಅವರೇ ಈ ಭರತನಾಟ್ಯ  ಪ್ರದರ್ಶನದ ಕೇಂದ್ರಬಿಂದು.  

“ಮಹಿಳೆಯರಿಗೆ ತಾಯ್ತನವೋ, ಉದ್ಯೋಗವೋ (ಕಲೆ/ಹವ್ಯಾಸ) ಎಂಬ ಗೊಂದಲ ಕಾಡುತ್ತದೆ. ನನ್ನ ಪ್ರಕಾರ ಇದರಲ್ಲಿ ಆಯ್ಕೆಯ ಪ್ರಶ್ನೆ ಬರುವುದೇ ಇಲ್ಲ. ಹೆಣ್ಣಾದವಳು ತಾಯ್ತನದ ಜೊತೆಗೆ ತನ್ನಿಷ್ಟದ ಕ್ಷೇತ್ರದಲ್ಲಿಯೂ ಮುಂದುವರಿಯಬಹುದು. ಅದನ್ನು ಮನವರಿಕೆ ಮಾಡಿಕೊಡುವುದೇ ಈ ಪ್ರದರ್ಶನದ ಉದ್ದೇಶ. ನಾನು ಮೊದಲಿನಂತೆ ನೃತ್ಯ ಪ್ರದರ್ಶನಗಳನ್ನು ನೀಡುವುದರ ಜೊತೆಗೆ, ಡ್ಯಾನ್ಸ್‌ ಕ್ಲಾಸ್‌ಗಳನ್ನು ಕೂಡ ನಡೆಸುತ್ತಿದ್ದೇನೆ. ಹೊಟ್ಟೆಗೆ ತೊಂದರೆಯಾಗಬಹುದಾದ ಸ್ಟೆಪ್ಸ್‌ ಗಳನ್ನು ಮಾಡುವುದಿಲ್ಲ. ವೈದ್ಯರ ಸಲಹೆಗಳನ್ನು ಪಾಲಿಸುತ್ತಾ, ದೇಹದ ಮಾತನ್ನು ಆಲಿಸಿದರೆ, ಯಾವ ತೊಂದರೆಯೂ ಆಗುವುದಿಲ್ಲ ಅನ್ನೋದು ನನ್ನ ಅನುಭವ’
ಅರಣ್ಯಿನಿ ಭಾರ್ಗವ್‌

ಎಲ್ಲಿ?: ಶೂನ್ಯ ಸ್ಪೇಸ್‌, 4ನೇ ಮಹಡಿ, ರೇರ್‌ ವಿಂಗ್‌, ಬ್ರಹ್ಮಾನಂದ ಕೋರ್ಟ್‌, ಲಾಲ್‌ಬಾಗ್‌ ರಸ್ತೆ 

ಯಾವಾಗ?: ಫೆ. 23-24, ಶನಿವಾರ ಸಂಜೆ 7, ಭಾನುವಾರ ಮಧ್ಯಾಹ್ನ 3.30

Advertisement

ಬುಕಿಂಗ್‌ ಪಾಸ್‌ಗಳಿಗೆ: vyuti.dance@gmail.com ಹೆಚ್ಚಿನ ವಿವರ: 9902077066

Advertisement

Udayavani is now on Telegram. Click here to join our channel and stay updated with the latest news.

Next