Advertisement
ಸರಕಾರಿ ಜಿಲ್ಲಾ ಗೋಶಾಲೆ ಸ್ಥಾಪನೆಗೆ ಕಡಬ ತಾಲೂಕಿನ ರಾಮಕುಂಜ ಗ್ರಾಮ ದಲ್ಲಿ ಸ್ಥಳ ಗುರುತಿಸಲಾಗಿದ್ದು, ಮೊದಲ ಹಂತದ ಕಾಮಗಾರಿಗೆ 36 ಲಕ್ಷ ರೂ.ಗಳಿಗೆ ಅನುಮೋದನೆ ನೀಡಲಾಗಿದ್ದು ಕೆಲಸ ಆರಂಭವಾಗಿದೆ. ಎರಡು ಬೋರ್‌ವೆಲ್ ಕೊರೆದಿದ್ದು ಉತ್ತಮ ನೀರು ದೊರಕಿದೆ. ಗೋಶಾಲೆ ಸುತ್ತ ಬೇಲಿ ನಿರ್ಮಾಣವಾಗುತ್ತಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗೋಶಾಲೆಗೆ ಕೊಟ್ಟಿಗೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.
Related Articles
Advertisement
ನಿಷೇಧಿತ ಏರ್‌ಗನ್ ಮಾರಿದರೆ ಕ್ರಮನಿಷೇಧಿತ ಏರ್‌ಗನ್‌ಗಳನ್ನು ಪ್ರಾಣಿ-ಪಕ್ಷಿಗಳಿಗೆ ಹಿಂಸೆ ನೀಡುವುದಕ್ಕೆ ಬಳಸಲಾಗುತ್ತಿದ್ದು, ಅದನ್ನು ತಡೆಗಟ್ಟುವಂತೆ ಶಶಿಧರ ಶೆಟ್ಟಿ ಕೋರಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನಿಷೇಧಿತ ಏರ್‌ಗನ್‌ಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಕಟುನಿಟ್ಟಿನ ಸೂಚನೆ ನೀಡಿದರು. ಬೀಡಾಡಿ ದನಗಳ ರಕ್ಷಣೆಗೆ ಕ್ರಮ
ಪಣಂಬೂರು ವ್ಯಾಪ್ತಿಯಲ್ಲಿ ಬೀಡಾಡಿ ಜಾನುವಾರುಗಳ ರಕ್ಷಣೆ ಮತ್ತು ನಿರ್ವಹಣೆಗೆ ಸ್ಥಳ ಒದಗಿಸುವಂತೆ ಕೋರಿ ಎನ್‌ಎಂಪಿಎಗೆ ಪತ್ರ ಮುಖೇನ ಕೋರಲಾಗಿದೆ, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಶಾಲೆ ತೆರೆದಲ್ಲಿ ನಿರ್ವಹಣೆ ಸುಲಭವಾಗುವುದರಿಂದ ಗೋಶಾಲೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಜಿಲ್ಲಾಡಳಿತದಿಂದ ನೀಡಲು ಕ್ರವ ಕೈಗೊಳ್ಳಲಾಗಿರುತ್ತದೆ ಎಂದರು. ಪ್ರಾಣಿ ಕಲ್ಯಾಣ ವಾರ್ಡನ್
ಪ್ರಾಣಿಗಳ ಮೇಲಿನ ಹಿಂಸೆ ಮತ್ತು ಕ್ರೌರ್ಯ ತಡೆಗಟ್ಟಲು ಅಗತ್ಯ ಕಾನೂನು ಸಲಹೆಗಳಿಗಾಗಿ ಸುಮಾ ಆರ್. ನಾಯಕ್ ಅವರನ್ನು ಪ್ರಾಣಿ ಕಲ್ಯಾಣ ವಾರ್ಡನ್ ಆಗಿ ನೇಮಕ ಮಾಡಲಾಯಿತು.