Advertisement

ಎರಡು ಕಾಪ್ಟರ್‌ ಗಳ ಡಿಕ್ಕಿ: 9 ಅಮೆರಿಕ ಯೋಧರ ಸಾವು

10:44 PM Mar 30, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಸೇನೆಯ ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ, 9 ಮಂದಿ ಯೋಧರು ಮೃತಪಟ್ಟಿದ್ದಾರೆ.

Advertisement

ಅಮೆರಿಕದ ಫೋರ್ಟ್‌ ಕ್ಯಾಂಪ್‌ಬೆಲ್‌ನ ನೈರುತ್ಯ ಕೆಂಟುಕಿಯಲ್ಲಿ ಸೇನೆಯ 2 ಎಚ್‌ಎಚ್‌-60 ಬ್ಲ್ಯಾಕ್‌ ಹಾಕ್‌ ಹೆಲಿಕಾಪ್ಟರ್‌ಗಳ ಸಿಬ್ಬಂದಿಯು ಬುಧವಾರ ರಾತ್ರಿ ನಿತ್ಯದ ತರಬೇತಿಯಲ್ಲಿದ್ದರು.

ಫೋರ್ಟ್‌ ಕ್ಯಾಂಪ್‌ಬೆಲ್‌ನ ವಾಯುವ್ಯಕ್ಕೆ 48 ಕಿ.ಮೀ. ದೂರದಲ್ಲಿ ರಾತ್ರಿ 10 ಗಂಟೆಗೆ ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಮಡಿದ 9 ಮಂದಿ ಯೋಧರ ಕುಟುಂಬಕ್ಕೆ ಮಾಹಿತಿ ರವಾನಿಸಿದ್ದು, ಮೃತದೇಹಗಳ ಹಸ್ತಾಂತರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next