Advertisement

ಲೈಂಗಿಕ ಕಿರುಕುಳ ಕೇಸ್: ಮುರುಘಾ ಶರಣರಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ

11:33 AM Sep 05, 2022 | Team Udayavani |

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

Advertisement

ಪೊಲೀಸ್ ಕಸ್ಟಡಿ ಅವಧಿ ಮಗಿದ ಕಾರಣ ಚಿತ್ರದುರ್ಗ ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾ.ಕೋಮಲಾ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

ರವಿವಾರ ಮುರುಘಾ ಶರಣರನ್ನು ಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಗಿತ್ತು. ಬಿಗಿ ಭದ್ರತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಕರೆತಂದ ಪೊಲೀಸರು, 2.30ರ ವರೆಗೆ ಸ್ಥಳ ಮಹಜರು ನಡೆಸಿದ್ದಾರೆ. ಈ ಸಂದರ್ಭ ಮಠದ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಧ್ಯಮದವರನ್ನು ಮಠದ ಮುಖ್ಯ ದ್ವಾರದ ಬಳಿಯೇ ತಡೆದಿದ್ದ ಪೊಲೀಸರು, ಶ್ರೀಗಳ ಮುಖ ಕಾಣದಂತೆ ಪೊಲೀಸ್‌ ವಾಹನದ ಸುತ್ತಲೂ ಬಟ್ಟೆಯಿಂದ ಮುಚ್ಚಲಾಗಿತ್ತು. ಮುಂಭಾಗದಲ್ಲಿ ಪೊಲೀಸ್‌ ಸಿಬಂದಿ ನಿಂತು ಶ್ರೀಗಳು ಕಾಣದಂತೆ ಮರೆ ಮಾಡಿಕೊಂಡು ಮಠದಿಂದ ವಾಪಸ್‌ ಡಿವೈಎಸ್‌ಪಿ ಕಚೇರಿಗೆ ಕರೆತಂದಿದ್ದರು.

ಇದನ್ನೂ ಓದಿ:ಮಠದ ಆವರಣದಲ್ಲೇ ನೇಣಿಗೆ ಶರಣಾದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಮಹಾಸ್ವಾಮೀಜಿ

ಮಠದಲ್ಲಿ ಸ್ವಾಮೀಜಿ ವಾಸ್ತವ್ಯವಿರುವ ಕೊಠಡಿಯಲ್ಲೂ ಪೊಲೀಸರು ಶೋಧ ನಡೆ ಸಿದ್ದು, ತನಿಖೆಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದ್ಯಾರ್ಥಿನಿ ನಿಲಯದಲ್ಲಿ ಈಗಾಗಲೇ ಸ್ಥಳ ಮಹಜರು ಮಾಡಲಾಗಿದೆ.

Advertisement

ಸೆ.7ಕ್ಕೆ ಜಾಮೀನು ಅರ್ಜಿ ವಿಚಾರಣೆ: ಜಾಮೀನು ಕೋರಿ ಶ್ರೀಗಳು ಶನಿವಾರ ಸಲ್ಲಿಸಿರುವ ಜಾಮೀನು ಅರ್ಜಿ ಸೆ.7ರಂದ ವಿಚಾರಣೆಗೆ ಬರಲಿದೆ. ಸರಕಾರಿ ಅಭಿಯೋಜಕರು ತಕರಾರು ಆಕ್ಷೇಪಣೆ ಸಲ್ಲಿಸಿದ ಬಳಿಕ ವಿಚಾರಣೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next