Advertisement

ಕೋಟೆನಾಡಿನಲ್ಲಿ 9 ಉಮೇದುವಾರಿಕೆ ಸಲ್ಲಿಕೆ

03:00 PM Apr 20, 2018 | Team Udayavani |

ಚಿತ್ರದುರ್ಗ: ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಏ. 19ರಂದು ಜಿಲ್ಲೆಯಲ್ಲಿ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕನ್ನಡ ಪಕ್ಷದಿಂದ ರಾಜಮದಕರಿ ನಾಯಕ, ಜೆಡಿಎಸ್‌ ಪಕ್ಷದಿಂದ ಕೆ.ಸಿ. ವೀರೇಂದ್ರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ರವೀಶ್‌ ಕುಮಾರ್‌, ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಕೆ. ಪೂರ್ಣಿಮಾ ಅವರು 3 ನಾಮಪತ್ರ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಎಂ. ಚಂದ್ರಪ್ಪ, ಜೆಡಿಯು ಪಕ್ಷದಿಂದ
ಎಚ್‌. ರಾಮಚಂದ್ರಪ್ಪ, ಪಕ್ಷೇತರರಾಗಿ ಜಿ. ಶಾಂತಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಮೊಳಕಾಲ್ಮೂರು ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ನಾಮಪತ್ರ ಸಲ್ಲಿಸಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

Advertisement

ಹೊಳಲ್ಕೆರೆ: ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಶಾಸಕ ಎಂ. ಚಂದ್ರಪ್ಪ, ಜೆಡಿಯು ಪಕ್ಷದಿಂದ ನೆಹರು ಕಾಲೋನಿ ರಾಮಚಂದ್ರಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಮೆಗಳಕೊಟ್ಟಿಗೆ ಜಿ.ಶಾಂತಪ್ಪ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಏ 24ರಂದು ಬಿಜೆಪಿ ಕಾರ್ಯಕರ್ತರ ಬೃಹತ್‌ ಮಟ್ಟದಲ್ಲಿ ರ್ಯಾಲಿ ಕೈಗೊಂಡು ಅಧಿಕೃತ ನಾಮಪತ್ರ
ಸಲ್ಲಿಸುತ್ತೇವೆ. ಇಂದು ಸಾಂಪ್ರಾಯಿಕ ಪದ್ಧತಿಯಂತೆ ಒಂದು ನಾಮಪತ್ರವನ್ನು ಸಾಂಕೇತಿಕವಾಗಿ ಸಲ್ಲಿಸಿದೆ ಎಂದರು.

ಎಂ.ಚಂದ್ರಪ್ಪ ಹೆಸರಲ್ಲಿ 2017-18ರಲ್ಲಿ 2,32,587 ರೂ. ವ್ಯವಸಾಯ 1,62,500 ರೂ, ಪತ್ನಿ ಚಂದ್ರಕಲಾ ಹೆಸರಿನಲ್ಲಿ 2,41,943ರೂ., ವ್ಯವಸಾಯ 5,04,780 ರೂ ಆದಾಯ ತೆರಿಗೆ ಮಾಹಿತಿ ಸಲ್ಲಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಹೆಸರಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 50 ಲಕ್ಷ ಠೇವಣಿ ಇದ್ದು, ಅಂಚೆ ಕವೇರಿ, ವಿಮಾ ಪಾಲಿಸಿಯಲ್ಲಿ 50ಸಾವಿರ ಇದೆ. ಪತ್ನಿ ಚಂದ್ರಕಲಾ ಹೆಸರಲ್ಲಿ 30ಲಕ್ಷ ಠೇವಣಿ, 4 ಲಕ್ಷ ರೂ. ಹಾಗೂ 50 ಸಾವಿರ ವಿಮಾ ಪಾಲಿಸಿಗಳಿವೆ. ಪುತ್ರ ಎಂ.ಸಿ. ರಘುಚಂದನ್‌ ಹೆಸರಲ್ಲಿ 5 ಲಕ್ಷದ ವಿಮಾ ಮೊಬಲಗು ಇದೆ. ಪತ್ನಿ ಚಂದ್ರಕಲಾ ಹೆಸರಲ್ಲಿ ಕೆ.ಎ.50ಎನ್‌ .-1400 ಕಾರು ಇದ್ದು, ಅದರ ಮೌಲ್ಯ 8ಲಕ್ಷ, 6.5 ಲಕ್ಷದ 13ಕೆಜಿ ಬೆಳ್ಳಿ, 50ಲಕ್ಷದ 1800ಗ್ರಾಮ ಚಿನ್ನದ ಆಭರಣಗಳಿವೆ. 

ಸ್ಥಿರಾಸ್ತಿಗಳಾದ ಕೃಷಿ ಭೂಮಿ ದೊಡ್ಡಉಳ್ಳಾರ್ತಿಯಲ್ಲಿ 9.20 ಎಕರೆ, ಯಾದಲಘಟ್ಟಯಲ್ಲಿ 8ಎಕರೆ, ದೊಡ್ಡಉಳ್ಳಾರ್ತಿಯಲ್ಲಿ 14.05 ಎಕರೆ, 15 ಎಕರೆ, ಬೆಂಗಳೂರು ಆಗ್ರಹಾರದಲ್ಲಿ 1 ಹಾಗೂ 3 ಎಕರೆ ಜಮೀನು ಇದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್‌ ತಾಲೂಕಿನ ವಾಬಸಂದ್ರದಲ್ಲಿ 1.23 ಎಕರೆ ಇದೆ. ಎಂ.ಸಿ.ರಘುಚಂದನ್‌ ಹೆಸರಲ್ಲಿ ಹಿರೆಗುಂಟನೂರು ಹೋಬಳಿ ಸಿಬಾರದಲ್ಲಿ 2 ಎಕರೆ, ಎಂ.ಸಿ.ದೀಪುಚಂದನ್‌ ಹೆಸರಲ್ಲಿ ಹಿರೆಗುಂಟನೂರು ಹೋಬಳಿ ಸಿಬಾರದಲ್ಲಿ 2 ಎಕರೆ ಜಮೀನು, ಇಬ್ಬರ ಹೆಸರಲ್ಲಿ ಪೋರ್ಟ್‌ ಸ್ಟೋನ್‌ ಕ್ರಷರ್ ಇದೆ.

ಎಂ. ಚಂದ್ರಪ್ಪ ಇವರು 2010-11ರಲ್ಲಿ 33,029,000 ರೂ. ಮೌಲ್ಯದ ಭೂಮಿ ಖರೀದಿಸಿದ್ದಾರೆ. ಹೊಳಲ್ಕೆರೆಯಲ್ಲಿ 4.30
ಎಕರೆ ಕೃಷಿಯೇತರ ಜಮೀನು, ಚಿತ್ರದುರ್ಗ ನಗರದಲ್ಲಿ 4 ಹಂತಸ್ತಿನ ಕಾಲೇಜು ಕಟ್ಟಡ ಇದೆ. ಬೆಂಗಳೂರು ದೇವಸಂದ್ರದಲ್ಲಿ ನಿವೇಶನವಿದೆ. ಚಿತ್ರದುರ್ಗ ಕಾಲೇಜು ಹಿಂಭಾದಲ್ಲಿ 1.20 ಎಕರೆ ಜಮೀನು ಇದೆ.

Advertisement

ಪತ್ನಿ ಚಂದ್ರಕಲಾ ಹೆಸರಲ್ಲಿ ಹೊಳಲ್ಕೆರೆ ಸಿದ್ದರಾಮಪ್ಪ ಬಡಾವಣೆಯಲ್ಲಿ 3.20 ಎಕರೆ ಜಮೀನು, ದೊಡ್ಡಉಳ್ಳಾರ್ತಿಯಲ್ಲಿ ವಾಸದ ಮನೆ, ಬೆಂಗಳೂರಿನ ಪೂಜಾರ್‌ ಲೇ ಔಟ್‌ನಲ್ಲಿ ವಾಸದ ಮನೆ ಎಂದು ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next