Advertisement

ಸ್ಪರ್ಮ್‌ ತಿಮಿಂಗಿಲ ದೇಹದಲ್ಲಿ 9.5 ಕೆಜಿ “ತೇಲುವ ಚಿನ್ನ” ಪತ್ತೆ…ಏನಿದು ಬೆಲೆಬಾಳುವ ವಸ್ತು!

11:06 AM Jul 08, 2023 | Team Udayavani |

ವಾಷಿಂಗ್ಟನ್:‌ ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್‌ ಸಮುದ್ರ ತೀರದಲ್ಲಿ ಸಾವನ್ನಪ್ಪಿದ್ದ “ಸ್ಪರ್ಮ್‌ ತಿಮಿಂಗಿಲ”(ದೊಡ್ಡ ಹಲ್ಲುಗಳ ತಿಮಿಂಗಿಲ) ದೇಹದಲ್ಲಿ ತೇಲುವ ಚಿನ್ನ ಎಂದೇ ಬಿಂಬಿತವಾಗಿರುವ ಸುಮಾರು 9.5 ಕೆಜಿಗಳಷ್ಟು ಅಂಬರ್ಗೀಸ್‌ ಅನ್ನು ವಿಜ್ಞಾನಿಗಳು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ʼAdipurushʼ ನಿಂದ ಜನರ ಭಾವನೆಗೆ ಧಕ್ಕೆಯಾಗಿದೆ ಕೈಮುಗಿದು ಕ್ಷಮೆ ಕೇಳುತ್ತೇನೆಂದ ಸಂಭಾಷಣೆಕಾರ

ಲಾಸ್‌ ಪಾಲ್ಮಾಸ್‌ ಯೂನಿರ್ವಸಿಟಿಯ ಪ್ರಾಣಿ ಆರೋಗ್ಯ ಮತ್ತು ಆಹಾರ ಭದ್ರತಾ ಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಫೆರ್ನಾಂಡಿಸ್‌ ರೋಡ್ರಿಗಸ್‌ ಅವರು ಸ್ಪರ್ಮ್‌ ತಿಮಿಂಗಿಲದ ಅಂಬರ್‌ ಗ್ರೀಸ್‌ ಅನ್ನು ವಶಕ್ಕೆ ಪಡೆದಿದ್ದಾರೆ. 9.5 ಕೆಜಿ ತಿಮಿಂಗಿಲ ವಾಂತಿಯ ಮೌಲ್ಯ ಅಂದಾಜು 3 ಕೋಟಿ ರೂಪಾಯಿಯಾಗಿದೆ.

ನ್ಯೂಯಾರ್ಕ್‌ ಪೋಸ್ಟ್‌ ವರದಿಯ ಪ್ರಕಾರ, ಲಾಸ್‌ ಪ್ಲಾಮಾಸ್‌ ಡಿ ಗ್ರಾನ್‌ ಕೆನರಿಯಾ ವಿಶ್ವವಿದ್ಯಾಲಯದ ತಜ್ಞರ ಮಾಹಿತಿಯಂತೆ, ಅಂಬರ್‌ ಗ್ರೀಸ್‌ ಎಂದು ಕರೆಯಲ್ಪಡುವ ವಾಂತಿಯು ಸುಮಾರು 10 ಕಿಲೋ ಗ್ರಾಮ್‌ ನಷ್ಟು ತೂಕವಿದ್ದು, ಇದು ತಿಮಿಂಗಿಲದ ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದ ತಿಮಿಂಗಿಲ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆ.

ತಜ್ಞರ ಪ್ರಕಾರ, ಸಾವನ್ನಪ್ಪಿರುವ ಸ್ಪರ್ಮ್‌ ತಿಮಿಂಗಿಲ 33 ಅಡಿ ಉದ್ದವಿದ್ದು, 2 ಅಡಿ ಅಗಲವಾಗಿದೆ ಎಂದು ವರದಿ ತಿಳಿಸಿದೆ.

Advertisement

ಏನಿದು ಫ್ಲೋಟಿಂಗ್‌ ಗೋಲ್ಡ್:‌

ಸ್ಪರ್ಮ್‌ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಸ್ಪರ್ಮ್‌ ತಿಮಿಂಗಿಲದ ವಾಂತಿಯನ್ನು “ಅಂಬರ್‌ ಗ್ರೀಸ್”‌ ಎಂದು ಕರೆಯುತ್ತಾರೆ. ಈ ಅಂಬರ್‌ ಗ್ರೀಸ್‌ ಅನ್ನು ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆ ಉದ್ಯಮದಲ್ಲಿ ಭಾರೀ ಬೇಡಿಕೆ ಹೊಂದಿದೆ.

ಕುತೂಹಲದ ವಿಷಯವೆಂದರೆ ಸ್ಪರ್ಮ್‌ ತಿಮಿಂಗಿಲದ ದೇಹದೊಳಗೆ ಈ ಅಂಬರ್‌ ಗ್ರೀಸ್‌ ವಸ್ತು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಈವರೆಗೂ ಸಾಧ್ಯವಾಗಿಲ್ಲ. ಆದರೆ ತಿಮಿಂಗಿಲ ಕೊಕ್ಕಿನಂತಹ ಜಲಚರವನ್ನು ತಿಂದ ಸಂದರ್ಭದಲ್ಲಿ ಅಂಬರ್‌ ಗ್ರೀಸ್‌ ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next