ನವದೆಹಲಿ: ಕೋವಿಡ್ ಹೊಡೆತದಿಂದ ಭಾರತ ಆರ್ಥಿಕವಾಗಿ ಬಹಳ ಕುಸಿದಿದ್ದರೂ ನಿಧಾನಕ್ಕೆ ಚೇತರಿಸಿಕೊಳ್ಳುತ್ತಾ ಸಾಗಿದೆ. ಇದರ ಮಧ್ಯೆಯೇ ಭಾರತದ ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಹೇಳಿದೆ.
ಈ ಸಂಸ್ಥೆ ದೇಶವೊಂದರ ಆರ್ಥಿಕ ಪ್ರಗತಿಯ ಗತಿಯನ್ನು ಪರಿಶೀಲಿಸಿ, ಮಾಹಿತಿ ನೀಡುವುದಕ್ಕೆ ಖ್ಯಾತವಾಗಿದೆ. ಮುಂದಿನ ವಿತ್ತೀಯ ತ್ತೈಮಾಸಿಕಗಳಲ್ಲಿ ಭಾರತದ ಆರ್ಥಿಕತೆ ಸುಧಾರಿಸಲಿದೆ.
ಒಟ್ಟಾರೆ ಈ ವಿತ್ತೀಯ ವರ್ಷದಲ್ಲಿ ಶೇ.9.5ರಷ್ಟು ಪ್ರಗತಿ ಸಾಧಿಸಲಿದೆ. ಮುಂದಿನ ವರ್ಷ ಶೇ.7ರಷ್ಟು ಏರಿಕೆಯಾಗಲಿದೆ ಎಂದು ಎಸ್ ಆ್ಯಂಡ್ ಪಿ ಹೇಳಿದೆ.
ಇದನ್ನೂ ಓದಿ:ಸಿಎಂ ದೆಹಲಿ ಭೇಟಿ ಬಗ್ಗೆ ತಪ್ಪು ಅರ್ಥ ಬೇಡ : ಗೃಹ ಸಚಿವ ಆರಗ ಜ್ಞಾನೇಂದ್ರ
ಸದ್ಯ ದುರ್ಬಲವಾಗಿರುವ ಭಾರತದ ಆರ್ಥಿಕ ವ್ಯವಸ್ಥೆ, ಜಿಡಿಪಿಯ ಶೇ.90ರಷ್ಟು ಸಾಲವೇ ಇರುವುದರ ನಡುವೆ ಅಂದಾಜು ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಪ್ರಗತಿ ಬಹಳ ಪ್ರಮುಖ ಸಂಗತಿ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ನಿರ್ದೇಶಕ ಆಂಡ್ರ್ಯೂ ವುಡ್ ಹೇಳಿದ್ದಾರೆ.