Advertisement

ಟೌನ್‌ ಕೋ-ಆಪರೇಟಿವ್‌ ಸೊಸೈಟಿಗೆ 9.19 ಲಕ್ಷ ಲಾಭ

01:22 PM Nov 02, 2021 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ 2020-21 ನೇ ಸಾಲಿಗೆ 9.19 ಲಕ್ಷ ರೂ. ಲಾಭದಲ್ಲಿದೆ ಎಂದು ಸೊಸೆ„ಟಿಯ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.

Advertisement

ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ಸೊಸೈಟಿಯ 104 ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯರ ಖಾತೆಯಲ್ಲಿ ಡಿವಿಡೆಂಟ್‌ ಹಣ ಜಮಾ ಮಾಡಲಾಗಿದೆ. ಆಧಾರ್‌ ಕಾರ್ಡ್‌ ನೀಡಿ ತೆಗೆದುಕೊಳ್ಳಬಹುದು. ಹೆಚ್ಚು ಡೆಪಾಸಿಟ್‌ ಮಾಡಿದರೆ ಸೊಸೈಟಿಯನ್ನು ಬಲಪಡಿಸಲು ಸಹಕಾರಿಯಾಗಲಿದೆ. ಇದೇ ವೇಳೆ ಡಿವಿಡೆಂಟ್‌ನಹಣವನ್ನು ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ಸೊಸೈಟಿ ಶತಮಾನೋತ್ಸವಕ್ಕೆ ಬಳಸಿಕೊಳ್ಳಲುಸರ್ವ ಸದಸ್ಯರು ಸಮ್ಮತಿ ನೀಡಿರುವುದಕ್ಕೆ ಜಯಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಅಮಿತ್‌ ಶಾ ಅವರು ಕೃಷಿ ಮತ್ತು ಸಹಕಾರ ಇಲಾಖೆಯನ್ನು ಬೇರ್ಪಡಿಸಿ ಸಹಕಾರಇಲಾಖೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಹೇಳಿರುವುದು ಸಹಕಾರ ಇಲಾಖೆಗೆ ಹೆಚ್ಚಿನಬಲ ಬಂದಂತಾಗಿದೆ. ಸೊಸೈಟಿಯ ನೌಕರರಿಗೆ ಹಾಗೂ ಷೇರುದಾರರಿಗೆ ಯಾವುದೇ ರೀತಿಯಲ್ಲಿತೊಂದರೆಯಾಗಲು ಬಿಡುವುದಿಲ್ಲ. 1.25 ಕೋಟಿರೂ. ಕಾಮಗಾರಿ ನಡೆದಿದ್ದು, ಸೊಸೈಟಿಗೆ 40 ಲಕ್ಷ ರೂ.ಗಳ ಬಾಡಿಗೆ ಬರುತ್ತಿದೆ. ಸದಸ್ಯರಿಗೆ ಶೇ. 12ರಷ್ಟು ಡೆವಿಡೆಂಟ್‌ ಕೊಡಲಾಗುತ್ತಿದೆ. ಹಿರಿಯರಿಗೆ ಒಂದು ಪರ್ಸೆಂಟ್‌ ಹೆಚ್ಚಿಗೆ ನೀಡುತ್ತೇವೆ ಎಂದು ಘೋಷಿಸಿದರು.

ಕೊರೊನಾ ಸಂದರ್ಭದಲ್ಲಿ ಸಾಲ ವಸೂಲಾತಿ ಮಾಡಲಿಲ್ಲ. ಕಾನೂನು ಬಿಗಿಯಾಗಿದೆ. ಸೋರಿಕೆಯನ್ನು ಕಡಿಮೆ ಮಾಡಿದ್ದೇವೆ. ಸಾಲಗಾರರಷ್ಟೆ ಜಾಮೀನುದಾರರ ಜವಾಬ್ದಾರಿಯೂಜಾಸ್ತಿಯಿದೆ. 2435 ಸದಸ್ಯರುಗಳಿದ್ದು, ಸೊಸೆ„ಟಿ ಲಾಭದಲ್ಲಿದೆಯೇ ವಿನಃ ನಷ್ಟವಂತೂ ಆಗಿಲ್ಲ.ಬಡವ-ಸಿರಿವಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲಾ ಜಾತಿಯವರಿಗೂ ಸದಸ್ಯತ್ವ ನೀಡಿದ್ದೇವೆ ಎಂದರು.

ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ ಉಪಾಧ್ಯಕ್ಷ ಡಾ| ರಹಮತ್‌ಉಲ್ಲಾ,ನಿರ್ದೇಶಕರಾದ ಸಿ.ಎಚ್‌. ಸೂರ್ಯಪ್ರಕಾಶ್‌, ಬಿ.ವಿ. ಶ್ರೀನಿವಾಸಮೂರ್ತಿ, ಬಿ.ಎಂ.ನಾಗರಾಜ ರಾವ್‌, ಕೆ.ಚಿಕ್ಕಣ್ಣ, ಸೈಯದ್‌ ನೂರುಲ್ಲಾ, ಎಸ್‌.ವಿ. ಪ್ರಸನ್ನ,ಕೆ. ಪ್ರಕಾಶ್‌, ಚಂದ್ರಪ್ಪ, ಎ.ಚಂಪಕ ಅಶೋಕ್‌,ಎಂ.ಎಸ್‌.ರಶ್ಮಿರಮೇಶ್‌, ನಾಮ ನಿರ್ದೇಶಕ ಎಸ್‌. ತಿಮ್ಮಪ್ಪ ವೇದಿಕೆಯಲ್ಲಿದ್ದರು. ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೆ„ಟಿಯ ವ್ಯವಸ್ಥಾಪಕ ಮಹ್ಮದ್‌ ನಯೀಮ್‌ 2020-21 ನೇ ಸಾಲಿನ ಲೆಕ್ಕ ಪರಿಶೋಧನೆಯಾಗಿರುವ ಲಾಭ-ನಷ್ಟ ಹಾಗೂ ಆಸ್ತಿ-ಜವಾಬ್ದಾರಿ ಬಜೆಟ್‌, ಲಾಭ ವಿಲೇವಾರಿ, ಹೊರಗಿನಿಂದ ತರಬಹುದಾದ ಸಾಲ ಪರಿಮಿತಿ, ಲೆಕ್ಕ ಪರಿಶೋಧಕರ ನೇಮಕ ಹಾಗೂ ಇತರೆ ವಿಷಯಗಳ ಕುರಿತು ವರದಿ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next