Advertisement
ಅಂದಹಾಗೆ, 2019ರ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದಂದು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಆಕರ್ಷಣೆಯಾಗಿದ್ದರು. ಲಿಂಗರಾಜು ಅವರ ಪರಿಶ್ರಮ ಹಾಗು ಛಲದ ಬಗ್ಗೆ ಭಗವಾನ್ ಗುಣಗಾನ ಮಾಡಿದರು. ಈ ಡೈರೆಕ್ಟರಿ ಎಷ್ಟೊಂದು ಉಪಯುಕ್ತ ಎಂಬುದನ್ನು ಸಾರುತ್ತಲೇ, ಲಿಂಗರಾಜು ಅವರ ಅನೇಕ ಕನಸುಗಳು ನನಸಾಗಲಿ’ ಎಂದರು. “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ ಕುರಿತು ಉಪೇಂದ್ರ ಹೇಳಿದ್ದಿಷ್ಟು.”ಕಳೆದ 20 ವರ್ಷಗಳ ಹಿಂದೆ ಇದೇ ಡೈರೆಕ್ಟರಿಯ ಪ್ರಥಮ ಪ್ರತಿಯನ್ನು ನಾನು ಬಿಡುಗಡೆ ಮಾಡಿದ್ದು ಇನ್ನೂ ನೆನಪಿದೆ. ಇಂದು ಸಂತೋಷ ಪಡುವ ವಿಷಯ. ಲಿಂಗರಾಜು ಅವರು ಬಹಳ ರಿಸ್ಕ್ ತೆಗೆದುಕೊಂಡು ಈ ಪುಸ್ತಕವನ್ನು ಹೊರ ತಂದಿದ್ದಾರೆ, ಅದೇ ಬೇಸರದಿಂದ ಇದು ಕೊನೆಯ ಆವೃತ್ತಿ ಎಂದು ಹೇಳಿದ್ದಾರೆ. ಆದರೆ, ಇದು ಕೊನೆಯದಾಗಬಾರದು. ಎಲ್ಲಿ ಮೊದಲು ಇರುತ್ತದೆಯೋ ಅಲ್ಲಿ ಕೊನೆ ಇರುತ್ತೆ. ಎಲ್ಲಿ ಕೊನೆ ಇರುತ್ತದೆಯೋ ಅಲ್ಲಿ ಮೊದಲು ಇರುತ್ತದೆ. ನಾವೆಲ್ಲ ಅವರ ಜೊತೆಗಿದ್ದೇವೆ. ಚಿತ್ರರಂಗದ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಉಪಯೋಗಿಸಿಕೊಂಡು ಒಂದು “ವೆಬ್‌ಸೈಟ್’ ತೆರೆಯಿರಿ’ ಎಂಬ ಸಲಹೆ ಕೊಟ್ಟರು ಉಪೇಂದ್ರ.
Advertisement
ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿಯ 8ನೇ ಆವೃತ್ತಿ ಬಿಡುಗಡೆ
06:49 PM Jun 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.