Advertisement

ಜಗ್ಗೇಶ್‌ ಕೈಯಲ್ಲಿ 8MM ಪಿಸ್ತೂಲ್‌

10:43 AM Sep 11, 2017 | |

ಕೆಲ ದಿನಗಳ ಹಿಂದಷ್ಟೇ ಜಗ್ಗೇಶ್‌ ಫೋಟೋಶೂಟ್‌ನಲ್ಲಿ ಭಾಗವಹಿಸಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿತ್ತು. ಆದರೆ, ಯಾವ ಸಿನಿಮಾ ಯಾರು ನಿರ್ದೇಶಕ, ಜಗ್ಗೇಶ್‌ ಅವರ ಗೆಟಪ್‌ ಹೇಗಿರುತ್ತದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಮೂಲಕ ಜಗ್ಗೇಶ್‌ ಅವರ ಹೊಸ ಚಿತ್ರವೊಂದು ಸೆಟ್ಟೇರಲು ಸಿದ್ಧವಾದಂತಾಗಿದೆ. ಜಗ್ಗೇಶ್‌ ಅವರ ಹೊಸ ಚಿತ್ರಕ್ಕೆ “8ಎಂಎಂ’ ಎಂದು ಹೆಸರಿಡಲಾಗಿದೆ.

Advertisement

ಕೈಯಲ್ಲಿ ಪಿಸ್ತೂಲ್‌ ಹಿಡಿದುಕೊಂಡು ಜಗ್ಗೇಶ್‌ ಚಿತ್ರದ ಫೋಟೋಶೂಟ್‌ನಲ್ಲಿ ಫೋಸ್‌ ಕೊಟ್ಟಿದ್ದಾರೆ. ಕೈಯಲ್ಲಿ ಪಿಸ್ತೂಲ್‌, “8ಎಂಎಂ’ ಎಂಬ ಟೈಟಲ್‌ ಕೇಳಿದಾಗ ನಿಮಗೆ ಇದೊಂದು ಕ್ರೈಮ್‌ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಸಿನಿಮಾನಾ ಎಂಬ ಸಂದೇಹ ಬರಬಹುದು. ಆದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. “ನೀರ್‌ದೋಸೆ’ಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್‌ ಮುಂದೆಯೂ ಹೊಸ ಬಗೆಯ ಪಾತ್ರವನ್ನೇ ಒಪ್ಪುತ್ತೇನೆ ಎಂದು ಹೇಳಿದ್ದರು.

ಅದರಂತೆ ಈಗ “8ಎಂಎಂ’ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್‌ ನೋಡಿದಾಗ ಜಗ್ಗೇಶ್‌ ಅವರ ಕಾಮಿಡಿ ಜಾನರ್‌ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿರುವಂತೆ ಕಾಣುತ್ತಿಲ್ಲ. ಏಕೆಂದರೆ ಚಿತ್ರದಲ್ಲಿ ಸಖತ್‌ ರಗಡ್‌ ಲುಕ್‌ನಲ್ಲಿ ಜಗ್ಗೇಶ್‌ ಕಾಣಿಸಿಕೊಳ್ಳುವ ಲಕ್ಷಣಗಳು ಪೋಸ್ಟರ್‌ನಲ್ಲಿ ಕಾಣಿಸುತ್ತಿವೆ. ಕಪ್ಪು ಬಣ್ಣದ ಪ್ಯಾಂಟ್‌-ಶರ್ಟ್‌ ಹಾಕಿ, ಕೈಯಲ್ಲಿ ಗನ್‌ ಹಿಡಿದು ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್‌ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಅದಕ್ಕೆ ಸರಿಯಾಗಿ ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಜಗ್ಗೇಶ್‌ ಅವರ ಹೊಸ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಸ್ಲಿಮ್‌ ಅಂಡ್‌ ಫಿಟ್‌ ಲುಕ್‌ನಲ್ಲಿರುವ ಜಗ್ಗೇಶ್‌ ಈ ಲುಕ್‌ಗಾಗಿ ಎರಡು ವರ್ಷ ಡಯೆಟ್‌ ಹಾಗೂ ವಕೌìಟ್‌ ಮಾಡಿದ್ದಾರಂತೆ. ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನ್ಫೆಂಟ್‌ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ. ಚಿತ್ರ ಸೆಪ್ಟೆಂಬರ್‌ 22 ರಂದು ಸೆಟ್ಟೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next