Advertisement
ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7464 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 136 ಸೋಂಕಿತರು ಮೃತಪಟ್ಟಿದ್ದಾರೆ.
Related Articles
Advertisement
ಆ ಬಳಿಕದ ಸ್ಥಾನಗಳಲ್ಲಿ ಮೈಸೂರು (726), ಬಳ್ಳಾರಿ (484), ದಾವಣಗೆರೆ (379), ಹಾಸನ (357), ಶಿವಮೊಗ್ಗ (314), ಬೆಂಗಳೂರು ಗ್ರಾಮಾಂತರ (214), ಬೆಳಗಾವಿ (290), ದಕ್ಷಿಣ ಕನ್ನಡ (448), ರಾಯಚೂರು (178), ಧಾರವಾಡ (299), ಕಲಬುರಗಿ (222), ಚಿತ್ರದುರ್ಗ (150), ಚಿಕ್ಕಮಗಳೂರು (136), ಉಡುಪಿ (176), ಮಂಡ್ಯ (188), ಉತ್ತರ ಕನ್ನಡ (147), ಕೊಪ್ಪಳ (217), ತುಮಕೂರು (250), ವಿಜಯಪುರ (139), ಬಾಗಲಕೋಟೆ (148), ಹಾವೇರಿ (132), ಗದಗ (169) ಮತ್ತು ಚಿಕ್ಕಬಳ್ಳಾಪುರ (124) ಜಿಲ್ಲೆಗಳಿವೆ.
ಇನ್ನುಳಿದಂತೆ, ಕೋಲಾರ (74), ರಾಮನಗರ (87), ಯಾದಗಿರಿ (66), ಬೀದರ್ (60), ಚಾಮರಾಜನಗರ (37), ಮತ್ತು ಕೊಡಗು (28) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇಂದು ರಾಜ್ಯದಲ್ಲಿ ಒಟ್ಟು 23,416 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 40,810 ಸೋಂಕು ಪತ್ತೆ ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಡೆಸಲಾಗಿದೆ. ಈ ಮೂಲಕ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 64,226 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.ರಾಜ್ಯದಲ್ಲಿ ಇದುವರೆಗೆ ಒಟ್ಟು 7,76,270 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಇದನ್ನು ಹೊರತಾಗಿಸಿ ರಾಜ್ಯಾದ್ಯಂತ 19,36,764 ಜನರಿಗೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಈ ಎಲ್ಲಾ ವಿಧಾನಗಳ ಮೂಲಕ ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 27,13,034 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.