Advertisement

Divorce: 89ರ ವೃದ್ಧನ ವಿಚ್ಛೇದನದ ಹೋರಾಟಕ್ಕೆ ಕಡೆಗೂ ಸೋಲು!

10:44 PM Oct 13, 2023 | Team Udayavani |

ನವದೆಹಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ವಿಶೇಷ ಪ್ರಕರಣ ಕಡೆಗೂ ವಿಚಿತ್ರವಾಗಿ ಮುಗಿದಿದೆ. 89 ವರ್ಷದ ನಿರ್ಮಲ್‌ ಸಿಂಗ್‌ ಪನೇಸರ್‌ 27 ವರ್ಷದ ಹಿಂದೆಯೇ, ತಮಗೆ ಪತ್ನಿ ಪರಮ್‌ಜಿತ್‌ ಕೌರ್‌ರಿಂದ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. 1996ರಲ್ಲಿಯೇ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೊನೆಗೂ 2023ರ ಅಕ್ಟೋಬರ್‌ ತಿಂಗಳಲ್ಲಿ ಮುಗಿದಿದೆ. ಆದರೆ ನ್ಯಾಯಪೀಠ ವಿಚ್ಛೇದನ ನಿರಾಕರಿಸಿದೆ!

Advertisement

ಭಾರತದಲ್ಲಿ ಸರಾಸರಿ ಪ್ರತೀ 100 ಮದುವೆಗಳಲ್ಲಿ ಒಂದು ವಿಚ್ಛೇದನದಲ್ಲೇ ಮುಕ್ತಾಯವಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಶತಾಯಗತಾಯ ಸೆಣೆಸಾಡಿ ಪತ್ನಿ ವಿಚ್ಛೇದನವನ್ನು ತಪ್ಪಿಸಿಕೊಂಡಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲ್‌, 1984ರಲ್ಲಿ ಮದುವೆಯಾಗಿದ್ದರು. ಆ ವೇಳೆ ತನಗೆ ಚೆನ್ನೈಗೆ ವರ್ಗಾವಣೆಯಾದಾಗ ಪತ್ನಿ ಬರಲು ಒಪ್ಪಲಿಲ್ಲ, ಅದರಿಂದ ನನಗೆ ಹಿಂಸೆಯಾಗಿದೆ, ಆಕೆ ನನ್ನನ್ನು ದೂರ ಮಾಡಿದ್ದಾರೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ನಿರ್ಮಲ್‌ ಅರ್ಜಿ ಸಲ್ಲಿಸಿದ್ದರು. ಪತ್ನಿ ಪರಮ್‌ಜಿತ್‌ ಪ್ರತಿವಾದ ಹೂಡಿ ವಿಚ್ಛೇದನದಿಂದ ತಪ್ಪಿಸಿಕೊಂಡಿದ್ದರು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಆಕೆಯ ಹೃದಯಪೂರ್ವಕ ಪ್ರಾರ್ಥನೆಗೆ ಕರಗಿದೆ. 82ರ ಈ ಇಳಿವಯಸ್ಸಿನಲ್ಲಿ ನನಗೆ ವಿಚ್ಛೇದಿತೆ ಎಂಬ ನೋವಿನಿಂದ ಸಾಯುವ ಇಚ್ಛೆಯಿಲ್ಲ, ಈಗಲೂ ನಾನು ಅವರ ಸೇವೆ ಮಾಡಲು ಸಿದ್ಧನಿದ್ದೇನೆ.

ಈ ವಿವಾಹವನ್ನು ಪವಿತ್ರವಾಗಿಡುವ ಎಲ್ಲ ಯತ್ನವನ್ನೂ ನಾನು ಮಾಡಿದ್ದೇನೆಂದು ಪತ್ನಿ ಪರಮ್‌ಜಿತ್‌ ವಾದಿಸಿದ್ದರು. ಅದನ್ನು ಸರ್ವೋಚ್ಚ ಪೀಠ ಮಾನ್ಯ ಮಾಡಿದೆ. ಭಾರತದಲ್ಲಿ ಮದುವೆಯನ್ನು ದೈವೀಕ, ಧಾರ್ಮಿಕ, ಬೆಲೆಕಟ್ಟಲಾಗದ ಭಾವನಾತ್ಮಕ ಬೆಸುಗೆಯೆಂದು ಭಾವಿಸಲಾಗುತ್ತದೆ. ಹೀಗಾಗಿ ವಿಚ್ಛೇದನ ನೀಡಿದರೆ ಪರಮ್‌ಜಿತ್‌ಗೆ ಅನ್ಯಾಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next