Advertisement

24 ಗಂಟೆಗಳಲ್ಲಿ 89 ಸಾವಿರ ಮಂದಿಗೆ ಸೋಂಕು : ಪುಣೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ

03:13 AM Apr 04, 2021 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಶುಕ್ರವಾರ-ಶನಿವಾರ ನಡುವಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 89,129 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 714 ಸೋಂಕಿತರು ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟಾರೆ ಕೊರೊನಾ ಸಾವಿನ ಸಂಖ್ಯೆ 1,64,110ಕ್ಕೇರಿದೆ.

Advertisement

ಮಹಾರಾಷ್ಟ್ರದಲ್ಲಿ ಒಂದೇ ದಿನ 49,447 ಹೊಸ ಪ್ರಕರಣಗಳು ದಾಖಲಾಗಿವೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿ ಯಲ್ಲಿ ಶಾಲೆಗಳಲ್ಲಿ ಪರೀಕ್ಷೆ ನಡೆಸಲು ಅಸಾಧ್ಯವಾದ ಕಾರಣ, 1ರಿಂದ 8ನೇ ತರಗತಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಅಲ್ಲಿನ ಸರಕಾರ‌ ನಿರ್ಧರಿಸಿದೆ.

ಪುಣೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಯಿಂದಲೇ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಒಡಿಶಾದಲ್ಲಿ ಕರ್ಫ್ಯೂ: ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಡಿಶಾದ ಸುಂದರ್‌ಗಢ, ಝಾರ್‌ಸುಗುದಾ, ಸಂಬಾಲ್ಪುರ, ಬರ್ಗಾ, ಬೊಲಾಂ ಗೀರ್‌, ನುವಾಪಾದ, ಕಾಲಾಹಂಡಿ, ನವರಂಗ್‌ಪುರ, ಕೊರಾ ಪಟ್‌, ಮಲ್ಕಾಂಗಿರಿಯಲ್ಲಿ ಎ. 5ರಿಂದ ಅನ್ವಯವಾ ಗುವಂತೆ ರಾತ್ರಿ ಕರ್ಫ್ಯೂಗೆ ಆದೇಶಿಸಲಾಗಿದೆ.

ಪಂಜಾಬ್‌ನಲ್ಲೂ ಪ್ರಕರಣ ಜಾಸ್ತಿ: ಪಂಜಾಬ್‌ನಲ್ಲಿ ಕಳೆದ 2 ತಿಂಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 12 ಪಟ್ಟು ಅಧಿಕವಾಗಿದೆ. ಶನಿವಾರ 57 ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 6,983ಕ್ಕೇರಿದೆ. ಹೊಸ ದಾಗಿ 2,903 ಸೋಂಕು ಪ್ರಕರಣಗಳು ಪತ್ತೆಯಾಗಿದೆ.

Advertisement

ಫಾರೂಕ್‌ ಆಸ್ಪತ್ರೆಗೆ ದಾಖಲು: ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ಒಳಗಾಗಿದ್ದ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ (85) ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಂದು ಶ್ರೀನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಲಸಿಕೆ ಬಳಿಕ 7 ಸಾವು: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫ‌ರ್ಡ್‌ ಲಸಿಕೆ ನೀಡಿದ ಬಳಿಕ 7 ಮಂದಿ ರಕ್ತಹೆಪ್ಪುಗಟ್ಟುವಿಕೆ ಕಾರಣ ಅಸುನೀಗಿದ್ದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಆದರೆ, ಲಸಿಕೆ ಪಡೆದುಕೊಂಡ ಬಳಿಕವೇ ಈ ಸಾವು ಸಂಭವಿಸಿದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲವೆಂದು ತಿಳಿಸಿದೆ. ಈವ ರೆಗೆ 18.1 ದಶ ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. 30 ಮಂದಿಗೆ ರಕ್ತಹೆಪ್ಪುಗಟ್ಟಿದ ಪ್ರಕರಣ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next