Advertisement

ಬ್ರೆಜಿಲ್ ಈಗ ಜಗತ್ತಿನ ನೂತನ ಕೋವಿಡ್ 19 ಹಾಟ್ ಸ್ಪಾಟ್;ಒಂದೇ ದಿನ 881 ಮಂದಿ ಸಾವು

08:56 AM May 14, 2020 | Nagendra Trasi |

ಸಾವೋ ಪೌಲೋ:ಕಳೆದ 24 ಗಂಟೆಯಲ್ಲಿ ಲ್ಯಾಟಿನ್ ಅಮೆರಿಕದ ಬಹುದೊಡ್ಡ ಆರ್ಥಿಕ ಕೇಂದ್ರವಾಗಿದ್ದ ಬ್ರೆಜಿಲ್ ನಲ್ಲಿ ಕೋವಿಡ್ 19 ವೈರಸ್ ಗೆ 881 ಮಂದಿ ಸಾವನ್ನಪ್ಪಿದ್ದು, ಒಟ್ಟು ಈವರೆಗೆ 12,400 ಜನರು ಸಾವನ್ನಪ್ಪಿದಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಕಳೆದ ಎರಡು ವಾರಗಳಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದೆ ಎಂದು ಬ್ರೆಜಿಲ್ ತಿಳಿಸಿದೆ. ದೇಶದಲ್ಲಿ 1,77,589 ಕೋವಿಡ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಬ್ರೆಜಿಲ್ ಈಗ ಜರ್ಮನಿಯನ್ನು ಹಿಂದಿಕ್ಕಿದೆ. ಜರ್ಮನಿಯಲ್ಲಿ 1,70,508 ಪ್ರಕರಣ ಪತ್ತೆಯಾಗಿದ್ದು, ಬ್ರೆಜಿಲ್ ಇದೀಗ ಫ್ರಾನ್ಸ್ ಅಂಕಿ (1,78,225)ದ ಸಮೀಪಕ್ಕೆ ಬಂದಿದೆ ಎಂದು ಹೇಳಿದೆ.

ಜಗತ್ತಿನಲ್ಲಿ ಅಮೆರಿಕ, ಬ್ರಿಟನ್, ಇಟಲಿ, ಪ್ರಾನ್ಸ್ ಮತ್ತು ಸ್ಪೇನ್ ಕೋವಿಡ್ 19 ವೈರಸ್ ತತ್ತರಿಸಿದ ಪ್ರಮುಖ ದೇಶಗಳಾಗಿದ್ದು, ಇದೀಗ ಬ್ರೆಜಿಲ್ 6ನೇ ದೇಶವಾಗಿ ಸೇರ್ಪಡೆಯಾಗಿದೆ. ಬ್ರೆಜಿಲ್ ನಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮಿತಿಮೀರತೊಡಗಿದೆ ಎಂದು ವರದಿ ವಿವರಿಸಿದೆ.

ವ್ಯಾಪಾರ, ವಹಿವಾಟನ್ನು ಬಂದ್ ಮಾಡುವುದು ಸೋಂಕಿಗಿಂತ ಅಪಾಯಕಾರಿಯಾಗಿದೆ ಎಂದು ಅಧ್ಯಕ್ಷ ಜೈರ್ ಬೋಲ್ಸೋನಾರೋ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next