Advertisement

ಜಿಲ್ಲೆಯಲ್ಲಿ 88 ಜನರಿಗೆ ಸೋಂಕು ದೃಢ

12:48 PM Aug 03, 2020 | Suhan S |

ಗದಗ: ಜಿಲ್ಲೆಯಲ್ಲಿ ರವಿವಾರಿ 88 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1568ಕ್ಕೆ ಏರಿದೆ. ಆ ಪೈಕಿ ರವಿವಾರ 6 ಜನರು ಸೇರಿದಂತೆ 540 ಜನರು ಗುಣಮುಖರಾಗಿದ್ದಾರೆ, ಇನ್ನುಳಿದಂತೆ 991 ಜನ ಸೋಂಕಿತರಿಗೆ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

Advertisement

ತಾಲೂಕುವಾರು ವಿವರ: ಗದಗ-27, ಮುಂಡರಗಿ-17, ನರಗುಂದ-16, ರೋಣ-14, ಶಿರಹಟ್ಟಿ-12 ಹಾಗೂ ಹೊರಜಿಲ್ಲೆಯ ಇಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಆ ಪೈಕಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ರಿಂಗ್‌ ರಸ್ತೆ, ವಕ್ಕಲಗೇರಿ ಓಣಿ, ರೈಲು ನಿಲ್ದಾಣದ ಹತ್ತಿರ, ಕುಂಬಾರ ಓಣಿ ಬೆಟಗೇರಿ, ಹೊಸಪೇಟ ಚೌಕ, ಸಂಭಾಪುರ ಪೊಲೀಸ್‌ ಕ್ವಾಟರ್ಸ್‌,ಕಾಗದಗೇರಿ ಓಣಿ, ಗಂಗಾಪುರ ಪೇಟ, ಹುಡ್ಕೊà ಕಾಲನಿ, ಬಾಲಕಿಯರ ಬಾಲಮಂದಿರ, ಸಂಭಾಪುರ ರಸ್ತೆ, ಎ.ಪಿ.ಎಂ.ಸಿ. ಯಾರ್ಡ್‌, ಜಿಮ್ಸ್‌ ಹಾಸ್ಟೆಲ್, ಕುರಹಟ್ಟಿ ಪೇಟ, ಕೇಶವ ನಗರ, ಹಾತಲಗೇರಿ ನಾಕಾ, ನೇಕಾರ ಕಾಲನಿ, ವಿವೇಕಾನಂದ ನಗರ, ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಮುಳಗುಂದ, ನರಗುಂದ ಪಟ್ಟಣದ ಕಲಕೇರಿ ಓಣಿ, ಗುರ್ಲಕಟ್ಟಿ ಓಣಿ, ಕುರ್ಲಗೇರಿ ಓಣಿ, ನರಗುಂದ ತಾಲೂಕಿನ ಕೊಣ್ಣೂರ, ಹುಣಶಿಕಟ್ಟಿ, ಬೈರನಹಟ್ಟಿ, ರೋಣ ಪಟ್ಟಣದ ಗುರುಭವನ ಹತ್ತಿರ, ಹೊರಪೇಟ ಓಣಿ, ರೋಣ ತಾಲೂಕಿನ ಹೊಳೆಆಲೂರ, ಪಿ.ಎಚ್‌.ಸಿ ಕ್ವಾಟರ್ಸ್‌ ಹಿರೇಹಾಳ, ಹಡಗಲಿ, ಸೂಡಿ, ಮುಶಿಗೇರಿ, ನಿಡಗುಂದಿ ಪಿ.ಎಚ್‌.ಸಿ. ಕ್ವಾಟರ್ಸ್‌, ಮುಂಡರಗಿ ಪಟ್ಟಣದ ವಿದ್ಯಾನಗರ, ಮುಂಡರಗಿ, ಮಲ್ಲಿಕಾರ್ಜುನಪುರ, ಭಜಂತ್ರಿ ಓಣಿ, ಪೋಸ್ಟ್‌ ಆಫೀಸ್‌ ಹತ್ತಿರ, ಎ.ಡಿ. ನಗರ, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಕೋಟಬಾಗಿ, ನಾಗರಹಳ್ಳಿ, ಹಮ್ಮಗಿ, ಡಂಬಳ, ಶಿರಹಟ್ಟಿ, ಕೋಟಿ ಓಣಿ, ಶಿರಹಟ್ಟಿ ತಾಲೂಕಿನ ಶಿಗ್ಲಿ, ರಾಮಗೇರಿ, ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಓಣಿ, ಸುಣಗಾರ ಓಣಿ, ಬಸ್ತಿ ಬಣ, ಗಜೇಂದ್ರಗಡದ ಜವಳಿ ಪ್ಲಾಟ್‌, ಬಸವೇಶ್ವರ ನಗರ, ಅಥಣಿ ತಾಲೂಕಿನ ಹುಲಗಬಲ್‌ ಗ್ರಾಮ, ಬಾಗಲಕೋಟ ಜಿಲ್ಲೆಯ ಇಲಕಲ್‌ ಭಾಗದ ಜನರಿಗೆ ಕೋವಿಡ್ ಸೋಂಕು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next