Advertisement

ಅತಿ ವೇಗದ ಚಾಲನೆಯಿಂದ ರಾಜ್ಯದಲ್ಲಿ 8,797 ಸಾವು

08:01 PM Aug 30, 2022 | Team Udayavani |

ನವದೆಹಲಿ: ಅತಿ ವೇಗದ ವಾಹನ ಚಾಲನೆಯಿಂದ 2021ರಲ್ಲಿ ಕರ್ನಾಟಕದ 8,797 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್‌ಸಿಆರ್‌ಬಿ)ದ ವರದಿಯ ಪ್ರಕಾರ, ಅತಿ ವೇಗದ ಚಾಲನೆಯಿಂದ ಒಟ್ಟಾರೆ ದೇಶದಲ್ಲಿ 87,050 ಸಾವುಗಳು ಸಂಭವಿಸಿವೆ.

Advertisement

ಈ ಪೈಕಿ ರಾಜ್ಯದ ಶೇ.10.1ರಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 11,419 ಮಂದಿ ಮೃತಪಟ್ಟಿದ್ದು, ಮೊದಲನೇ ಸ್ಥಾನದಲ್ಲಿದೆ.

ಅಜಾಗರೂಕ ಚಾಲನೆಯಿಂದ 42,853 ಮಂದಿ ಸಾವನಪ್ಪಿದ್ದಾರೆ. ಮದ್ಯಪಾನ ಸೇವಿಸಿ ವಾಹನ ಚಾಲನೆ ಕಾರಣದಿಂದ 2,935 ಮಂದಿ(ಶೇ. 1.9) ಮೃತಪಟ್ಟಿದ್ದಾರೆ. ದೇಶದಲ್ಲಿ ಕಳೆದ ವರ್ಷ ಒಟ್ಟು 0 4,03,116 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಿಂದ 1,55,622 ಮಂದಿ ಮೃತಪಟ್ಟಿದ್ದಾರೆ.

ದಿನಕೂಲಿ ನೌಕರರು ಹೆಚ್ಚು ಆತ್ಮಹತ್ಯೆ:
2021ರಲ್ಲಿ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ದಿನಗೂಲಿ ನೌಕರರು, ಸ್ವಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ರೈತರ ಸಂಖ್ಯೆಯೇ ಹೆಚ್ಚಿದೆ. ಕಳೆದ ವರ್ಷ 37,751 ದಿನಕೂಲಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8,803 ಸ್ವಯಂ ಉದ್ಯೋಗಿಗಳು, 11,724 ನಿರುದ್ಯೋಗಿಗಳು, 5,318 ರೈತರು ಹಾಗೂ 5,563 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಪ್ರಕರಣಗಳಲ್ಲಿ 1,18,979 ಪುರುಷರು ಮತ್ತು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ಅತಿ ಹೆಚ್ಚು ಅತ್ಯಾಚಾರ:
2021ರಲ್ಲಿ ದೇಶದಲ್ಲಿ ಒಟ್ಟು 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ದೆಹಲಿ ನಗರದಲ್ಲಿ ಅತಿ ಹೆಚ್ಚು ಅಂದರೆ 1,226 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಜೈಪುರ(502 ಪ್ರಕರಣಗಳು), ಮುಂಬೈ(364 ಪ್ರಕರಣಗಳು), ಇಂದೋರ್‌(165 ಪ್ರಕರಣಗಳು), ಬೆಂಗಳೂರು(117 ಪ್ರಕರಣಗಳು), ಹೈದರಾಬಾದ್‌ (116 ಪ್ರಕರಣಗಳು), ನಾಗ್ಪುರ(115 ಪ್ರಕರಣಗಳು) ಹಾಗೂ ಕೋಲ್ಕತಾ (14) ಇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next