ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರ್ಷಗಳಿಂದ ಯಾವುದೇ ಹುದ್ದೆಗಳಿಗೆ ನೇಮಕಾತಿ ಆಗಿರಲಿಲ್ಲ. ಇದರಿಂದ ನಾಲ್ಕೂ ನಿಗಮಗಳಲ್ಲಿ 2016 ರಿಂದ ಈವರೆಗೆ ಸಿಬ್ಬಂದಿಯ ನಿವೃತ್ತಿ ಹಾಗೂ ಇತರೆ ಕಾರಣದಿಂದ 13,669 ಹುದ್ದೆಗಳು ಖಾಲಿ ಆಗಿವೆ. 13 ಸಾವಿರ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ನಿಗಮಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ 6500 ಚಾಲನಾ ಸಿಬ್ಬಂದಿ ಹಾಗೂ 300 ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರೆತಿದೆ.
ಈ ಪೈಕಿ ಕೆಕೆಆರ್‌ಟಿಸಿಯಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಚಾಲನಾ ಪರೀಕ್ಷೆಯೂ ನಡೆಯುತ್ತಿದೆ. 2024 ರ ಜನವರಿ ಅಂತ್ಯದ ವೇಳೆಗೆ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ಇದಲ್ಲದೆ, 300 ಕಂಡಕ್ಟರ್‌ಗಳ ಹುದ್ದೆಗಳ ನೇಮಕಾತಿಗೆ ಅನುಮತಿ ಸಿಕ್ಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ.
ನಿಗಮ ಡ್ರೈವರ್ ಕಮ್ ಕಂಡಕ್ಟರ್ ತಾಂತ್ರಿಕ ಸಿಬ್ಬಂದಿ
ಕೆಎಸ್‌ಆರ್‌ಟಿಸಿ 2000 300
ಎನ್‌ಡಬ್ಲ್ಯುಕೆಆರ್‌ಟಿಸಿ 2000 00
ಬಿಎಂಟಿಸಿ 2500 00
ಕೆಕೆಆರ್‌ಟಿಸಿ 1,919 00
ಒಟ್ಟು 8,419 300