Advertisement

507 ಹಳ್ಳಿಗಳಲ್ಲಿ 871 ಕಾನೂನು ಅರಿವು ಶಿಬಿರ

02:56 PM Nov 15, 2021 | Team Udayavani |

ಚಾಮರಾಜನಗರ: ಎಲ್ಲಾ ಮಕ್ಕಳು ಕಾನೂನನ್ನು ಅರಿತು ತಮ್ಮ ತಮ್ಮ ಪೋಷಕರುಗಳಿಗೆ ಹಾಗೂ ಅಕ್ಕ ಪಕ್ಕದವರುಗಳಿಗೆ ಹೆಚ್ಚಿನ ತಿಳಿವಳಿಕೆ ನೀಡಬೇಕು. ಮಕ್ಕಳ ಕಾನೂನು, ಮಕ್ಕಳ ಹಕ್ಕುಗಳು, ಪಾಲನೆ ಪೋಷಣೆಯ ಬಗ್ಗೆ ಅರಿಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾಶಿವ ಎಸ್‌ ಸುಲ್ತಾನಪುರಿ ತಿಳಿಸಿದರು.

Advertisement

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಎಡಿಆರ್‌ ಕಟ್ಟಡದಲ್ಲಿ ಮಕ್ಕಳ ದಿನಾಚರಣೆ ಹಾಗೂ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಡೆದ 45 ದಿನಗಳ ಕಾನೂನು ಅರಿವು ಶಿಬಿರಗಳ ಸಮಾರೋಪದಲ್ಲಿ ಅವರು ಮಾತನಾಡಿದರು. ಅ. 2ರಿಂದ ನವೆಂಬರ್‌ 14ರವರೆಗೆ ಜಿಲ್ಲೆಯಲ್ಲಿ ಒಟ್ಟು 507 ಹಳ್ಳಿಗಳಲ್ಲಿ ಒಟ್ಟು 871 ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಒಟ್ಟು 75,711 ಫ‌ಲಾನುಭವಿಗಳು ಕಾನೂನು ಅರಿವು ಪಡೆದುಕೊಂಡಿರುತ್ತಾರೆ. ಜಿಲ್ಲೆಯ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಸಹ ಮನೆಮನೆಗೂ ಕರಪತ್ರಗಳನ್ನು ಹಂಚಿ ಸುಮಾರು 66,753 ಫ‌ಲಾನುಭವಿಗಳಿಗೆ ಕಾನೂನು ಅರಿವು ಮೂಡಿಸಿದ್ದಾರೆ ಎಂದು ತಿಳಿಸಿದರು. ವೆಬಿನಾರ್‌ ಮೂಲಕ ಜಿಲ್ಲೆಯಲ್ಲಿ ಒಟ್ಟು 18 ಕಾರ್ಯಕ್ರಮಗಳನ್ನು ಮೊಬೈಲ್‌ ವ್ಯಾನ್‌ಗಳನ್ನು ಬಳಸಿಕೊಂಡು ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಂದರೆ ಒಟ್ಟು 507 ಗ್ರಾಮಗಳನ್ನು ಪೂರ್ಣಗೊಳಿಸಿ ಒಟ್ಟು 15,651 ಫ‌ಲಾನುಭವಿಗಳಿಗೆ ಕಾನೂನು ಅರಿವು ಮೂಡಿಸಿದ್ದು, ಕಾರಾಗೃಹದಲ್ಲಿ 7 ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಟ್ಟು 472 ಜನರಿಗೆ ಕಾನೂನು ಅರಿವು ಮೂಡಿಸಲಾಗಿದೆ ಎಂದರು.

ಇದನ್ನೂ ಓದಿ:- ಸಿದ್ದರಾಮಯ್ಯರಂತಹ ಸುಳ್ಳುಗಾರರನ್ನು ರಾಜ್ಯದ ಜನರು ಇದುವರೆಗೆ ಕಂಡಿಲ್ಲ: ಬಿಜೆಪಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಮಾತನಾಡಿ, ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ನೆರವು ಸಿಗಬೇಕೆಂಬ ಸದುದ್ದೇಶದಿಂದ ಹಲವು ಕಾನೂನು ಅರಿವು ಕಾರ್ಯಕ್ರಮಗಳನ್ನು, ಶಿಬಿರ ನಡೆಸಲಾಗಿದೆ. 45 ದಿನಗಳ ಕಾರ್ಯಕ್ರಮ ಅಂತ್ಯಗೊಳ್ಳುತ್ತಿರುವುದರಿಂದ 45 ದಿನಗಳ ಕಾಲ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಹಮ್ಮಿಕೊಳ್ಳಲು ಸಹಕರಿಸಿದ ಎಲ್ಲಾ ಇಲಾಖೆಗಳಿಗೆ ಹಾಗೂ ಕಾನೂನು ಸ್ವಯಂ ಸೇವಕರುಗಳಿಗೆ ಪ್ರಾಧಿಕಾರದ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

Advertisement

ನಗರದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮ್ಮದ್‌ ರೋಷನ್‌ ಷಾ, ಮಕ್ಕಳ ಸಹಾಯವಾಣಿ ಸಂಯೋಜಕಿ ಲತಾ ಹಾಗೂ ಕಾನೂನು ಸ್ವಯಂ ಸೇವಕರು ಹಾಗೂ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next