Advertisement

ಚಾ.ನಗರಕ್ಕೆ ಶೇ.87.10ರಷ್ಟು ಫ‌ಲಿತಾಂಶ

10:43 AM Aug 12, 2020 | Suhan S |

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ.87.10ರಷ್ಟು ಫ‌ಲಿತಾಂಶ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 10,465 ವಿದ್ಯಾರ್ಥಿಗಳಲ್ಲಿ 9,115 ಮಂದಿ ಉತ್ತೀರ್ಣರಾಗಿದ್ದು, ಶೇ.89.67ರಷ್ಟು ವಿದ್ಯಾರ್ಥಿನಿಯರು, ಶೇ.84.45ರಷ್ಟು ಬಾಲಕರು ಪಾಸಾಗಿದ್ದಾರೆ.

Advertisement

ತಾಲೂಕುವಾರು ಫ‌ಲಿತಾಂಶ: ಚಾ.ನಗರ ತಾಲೂಕು ಶೇ.83.80, ಗುಂಡ್ಲುಪೇಟೆ ಶೇ.74.50, ಕೊಳ್ಳೇಗಾಲ ಶೇ.96.01, ಹನೂರು ಶೇ.97.14, ಯಳಂದೂರು ಶೇ.86ರಷ್ಟು ಫ‌ಲಿತಾಂಶ ಪಡೆದಿವೆ. ಚಾಮರಾಜನಗರ, ಗುಂಡ್ಲುಪೇಟೆ ತಾಲೂಕುಗಳು ಬಿ ದರ್ಜೆ ಪಡೆದಿದ್ದರೆ, ಹನೂರು, ಕೊಳ್ಳೇಗಾಲ, ಯಳಂದೂರು ಎ ದರ್ಜೆ ಪಡೆದಿವೆ. ಜಿಲ್ಲೆಯು ರಾಜ್ಯ ಮಟ್ಟದಲ್ಲಿ 11ನೇ ಸ್ಥಾನ ಪಡೆದಿದ್ದು, ಬಿ ದರ್ಜೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ ಜಿಲ್ಲೆ 15ನೇ ಸ್ಥಾನ ಪಡೆದಿದ್ದು, ಈ ಬಾರಿ 4 ಸ್ಥಾನ ಮೇಲಕ್ಕೇರಿದೆ.

ಮೇಘನಾಳಿಗೆ ಚಿನ್ನದ ಉಂಗುರ ಕೊಡುಗೆ :  ಚಾಮರಾಜನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಟಾಪರ್‌ ಆಗಿರುವ ಕೊಳ್ಳೇಗಾಲದ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿನಿ ಎಂ.ಮೇಘನಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಸ್‌ಪಿ ದಿವ್ಯಾ ಸಾರಾ ಥಾಮಸ್‌ ಮೇಘನಾಳಿಗೆ ಚಿನ್ನದ ಉಂಗುರ ಕೊಡುಗೆಯಾಗಿ ಬಾಲಕಿಯ ಬೆನ್ನು ತಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next