Advertisement

ಆಗ್ನೇಯ ಶಿಕ್ಷಕರ ಕ್ಷೇತ್ರ ಶೇ.85.46 ಮತದಾನ

03:45 AM Feb 04, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಉಪಚುನಾವಣೆಯಲ್ಲಿ ಶೇ. 85.46 ಮತದಾನವಾಗಿದೆ.

Advertisement

ಕ್ಷೇತ್ರದ ವ್ಯಾಪ್ತಿಗೆ ಸೇರಿದ ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.87.8, ದಾವಣಗೆರೆ ಜಿಲ್ಲೆಯಲ್ಲಿ ಶೇ. 81.58, ತುಮಕೂರಿನಲ್ಲಿ ಶೇ. 84.08, ಚಿಕ್ಕಬಳ್ಳಾಪುರದಲ್ಲಿ ಶೇ. 89.46, ಕೋಲಾರದಲ್ಲಿ ಶೇ.88.24ರಷ್ಟು ಮತದಾನ ಆಗಿದೆ.

ಈ ಪೈಕಿ ಅತಿ ಕಡಿಮೆ 2,818 ಮತದಾರರು ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.89.46ರಷ್ಟು ಮತದಾನ ಆಗಿದೆ. ಅತಿ ಹೆಚ್ಚು 7,508 ಮತದಾರರು ಇರುವ ತುಮಕೂರು ಜಿಲ್ಲೆಯಲ್ಲಿ ಶೇ. 84.08ರಷ್ಟು ಮತದಾನ ಆಗಿದೆ. ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ (ದಾವಣಗೆರೆ, ಹರಿಹರ, ಜಗಳೂರು) 3,345 ಮತದಾರರು ಇದ್ದು, ಅಲ್ಲಿ ಅತಿ ಕಡಿಮೆ ಶೇ.81.58ರಷ್ಟು ಮತದಾನ ಆಗಿದೆ.

ಮತದಾನ ಪ್ರಕ್ರಿಯೆ ಶಾಂತಯುತವಾಗಿ ನಡೆದಿದ್ದು, ಎಲ್ಲಿಯೂ ಮರು ಮತದಾನದ ಅವಶ್ಯತೆ ಬಿದ್ದಿಲ್ಲ. ಫೆ.6ರಂದು ಮತ ಏಣಿಕೆ ನಡೆಯಲಿದ್ದು, ಅದೇ ದಿನ ಸಂಜೆ ವೇಳೆಗೆ ಫ‌ಲಿತಾಂಶ ಹೊರ ಬೀಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next