Advertisement
ಶೇ. 97ರಷ್ಟು ಜನರು ಉತ್ತಮ ವೃತ್ತಿ ಅವಕಾಶ ದೊರೆಯಲು ಉನ್ನತ ಕೌಶಲ್ಯವೇ ಪ್ರಮುಖ ಎಂದಿದ್ದು, ಶೇ. 85ರಷ್ಟು ಜನರು ಬಡ್ತಿ, ವೃತ್ತಿಯ ಬದಲಾವಣೆ, ವೇತನ ಹೆಚ್ಚಳದ ಬಗ್ಗೆ ಆಶಾವಾದಿಗಳಾಗಿದ್ದಾರೆ.
- ವೃತ್ತಿ ನಿರೀಕ್ಷೆಗಳು: ಪ್ರತಿಕ್ರಿಯಿಸಿದವರಲ್ಲಿ 85% ಮಂದಿ ಕ್ರಿಯಾಶೀಲ ಉದ್ಯೋಗ ಮಾರುಕಟ್ಟೆಯನ್ನು ಪ್ರತಿಬಿಂಬಿಸುವ ಕೌಶಲ್ಯ ಪಡೆದ ನಂತರ ಸಕ್ರಿಯವಾಗಿ ವೃತ್ತಿ ಬದಲಾವಣೆಗಳನ್ನು ಬಯಸುತ್ತಾರೆ.
- ಅಪ್ಸ್ಕಿಲ್ಲಿಂಗ್ ಟ್ರೆಂಡ್ಗಳು: ಪ್ರತಿಸ್ಪಂದಿಸಿದವರಲ್ಲಿ 45% ಮಂದಿ ತಮ್ಮ ಕಂಪನಿ ಅಥವಾ ಅಪೇಕ್ಷಿತ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆ ಹೇಳುತ್ತಾರೆ.
- ಆದ್ಯತೆಯ ಉನ್ನತ ಕೌಶಲ್ಯದ ವಿಧಾನಗಳು: ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವವರಲ್ಲಿ, 65% ರಷ್ಟು ಜನ ಅರೆಕಾಲಿಕ ಆನ್ಲೈನ್ ಕಾರ್ಯಕ್ರಮಗಳು ಅಥವಾ ಕೋರ್ಸ್ಗಳಿಗೆ ದಾಖಲಾಗಲು ಬಯಸುತ್ತಾರೆ, ಹೊಂದಿಕೊಳ್ಳುವ ಕಲಿಕೆಯ ಆಯ್ಕೆಗಳ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾರೆ.
- ಉನ್ನತ ಡಿಜಿಟಲ್ ಆರ್ಥಿಕ ಕೌಶಲ್ಯಗಳು: ಡೇಟ ವಿಜ್ಞಾನ ಮತ್ತು ಬಿಸಿನೆಸ್ ಅನಲಿಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಪ್ರೋಗ್ರಾಂ ಮತ್ತು ಯೋಜನಾ ನಿರ್ವಹಣೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೆವ್ಆಪ್ಸ್, ಸೈಬರ್ ಭದ್ರತೆ, ಉತ್ಪನ್ನ ನಿರ್ವಹಣೆ ಮತ್ತು ಸಾಫ್ಟ್ ವೇರ್ ಅಭಿವೃದ್ಧಿ…. ಇವು, ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳಾಗಿ ಹೊರಹೊಮ್ಮಿವೆ. ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿನ ಪರಿಣತಿಗಾಗಿ ಇರುವ ಬೇಡಿಕೆಯನ್ನು ಇದು ಎತ್ತಿ ತೋರುತ್ತದೆ.