Advertisement

ರಾಜ್ಯದಲ್ಲಿಂದು 85 ಕೋವಿಡ್‌ ಪ್ರಕರಣ; ಪಾಸಿಟಿವಿಟಿ ದರ ಶೇ. 1.18ಕ್ಕೆ ಏರಿಕೆ

07:57 PM Apr 26, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 85 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ಸಕ್ರಿಯ ಪ್ರಕರಣ ಸಂಖ್ಯೆ 1686 ಏರಿಕೆಯಾಗಿದೆ. ಬೆಂಗಳೂರಿನಲ್ಲೇ 82 ಪ್ರಕರಣಗಳು ವರದಿಯಾಗಿವೆ.

Advertisement

ರಾಜ್ಯದಲ್ಲಿ 7171 ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 85 ಮಂದಿಗೆ ಸೋಂಕು ದೃಢವಾಗಿದೆ. ಆ ಮೂಲಕ ದಿನದ ಕೊರೊನಾ ಪಾಸಿಟಿವಿಟಿ ದರ ಶೇ. 1.18ಕ್ಕೆ ಹಾಗೂ ವಾರದ ಸೋಂಕಿನ ದರ ಶೇ.1.4ಗೆ ಏರಿಕೆಯಾಗಿದೆ. 70 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಅಕ್ರಮ ಆರೋಪಿ ದಿವ್ಯಾ ಜತೆ ಡಿಕೆಶಿ ಫೋಟೋ: ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ , ಉಡುಪಿ, ಉತ್ತರಕನ್ನಡ, ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಉಳಿದಂತೆ ಬೆಂಗಳೂರು ನಗರದಲ್ಲಿ 82, ವಿಜಯಪುರ 2, ತುಮಕೂರು 1 ಪಾಸಿಟಿವ್‌ ವರದಿಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next