Advertisement

2020ರಿಂದ ಏರ್‌ಪೋರ್ಟ್‌ಗಳಲ್ಲಿ ಬಾಡಿ ಸ್ಕ್ಯಾನರ್‌ ಅಳವಡಿಕೆ ಕಡ್ಡಾಯ

01:30 AM Jun 03, 2019 | Team Udayavani |
ನವದೆಹಲಿ: ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ರೀತಿ ಬದಲಾಗಲಿದೆ. ಸದ್ಯ ಡೋರ್‌ ಫ್ರೇಮ್‌ ಮೆಟಲ್ ಡಿಟೆಕ್ಟರುಗಳನ್ನು ಏರ್‌ಪೋರ್ಟ್‌ಗಳಲ್ಲಿ ಅಳವಡಿಸಲಾಗಿದ್ದು, ಅದನ್ನು ದಾಟಿ ಬಂದ ನಂತರ ಪ್ರತಿ ಪ್ರಯಾಣಿಕರನ್ನೂ ಕೈಯಿಂದ ನಿರ್ವಹಿಸುವ ಸ್ಕ್ಯಾನರ್‌ ಬಳಸಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಆದರೆ 2020ರ ಮಾರ್ಚ್‌ ವೇಳೆಗೆ ಎಲ್ಲ ವಿಮಾನ ನಿಲ್ದಾಣಗಳೂ ಬಾಡಿ ಸ್ಕ್ಯಾನರ್‌ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸದ್ಯದ ವಿಧಾ ನದಲ್ಲಿ ಸ್ಫೋಟಕಗಳು, ಲೋಹೇತರ ಶಸ್ತ್ರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಬಾಡಿ ಸ್ಕ್ಯಾನರ್‌ ಯಾವುದೇ ಅಪಾಯವನ್ನೂ ಪತ್ತೆ ಮಾಡುತ್ತದೆ.

ದೆಹಲಿ, ಮುಂಬೈ, ಕೋಲ್ಕತಾ, ಚೆ‌ನ್ನೈ ಸೇರಿ ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ಈ ಸ್ಕ್ಯಾನರ್‌ಗಳನ್ನು ಅಳವಡಿಸಲಾಗು ತ್ತದೆ. ಉಳಿದ ವಿಮಾನ ನಿಲ್ದಾಣಗಳಿಗೆ 2021ರವರೆಗೆ ಕಾಲಾವಕಾಶವಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next